ಹೊಸಪೇಟೆ | ಚಿತ್ತವಾಡ್ಗಿ ಜಾಮಿಯಾ ಮಸ್ಜಿದ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೊಸಪೇಟೆ :ನಗರದ ವಾರ್ಡ್ ನಂ.12ರಲ್ಲಿ ಚಿತ್ತವಾಡ್ಗಿ ಜಾಮಿಯಾ ಮಸ್ಜಿದ್ ಶಾದಿಮಹಲ್ ಆವರಣದಲ್ಲಿ ಚಿತ್ತವಾಡ್ಗಿ ಜಾಮಿಯಾ ಮಸ್ಜಿದ್ ಕಮಿಟಿಯ ಆಡಳಿತ ಮಂಡಳಿ ಹಾಗು ಸಪ್ತಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮೂತ್ರಪಿಂಡ, ಹೃದಯರೋಗ, ನರರೋಗ, ಕ್ಯಾನ್ಸರ್ ಹಾಗು ಇನ್ನಿತರ ಹಲವಾರು ಕಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಉಚಿತ ತಪಾಸಣಾ ಶಿಬಿರದಲ್ಲಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಮುಹಮ್ಮದ್ ಇಮಾಮ್ ನಿಯಾಜಿರವರು ಮಾತನಾದರು.
ಮಧ್ಯಾಹ್ನದ ವೇಳೆಗೆ 455 ಜನರನ್ನು ತಪಾಸಣೆ ಮಾಡಲಾಯಿತು
ಈ ಸಂದರ್ಭದಲ್ಲಿ ನಗರಸಬಾ ಸದಸ್ಯರಾದ ಅಸ್ಲಾಂ ಮಳಗಿ, ಖಾಜಾ ಹುಸ್ಸೇನ್ ನಿಯಾಜಿ, ಮಳಗಿ ಕಾಜಾ ಸಾಬ, ಇಸ್ಮಾಯಿಲ್, ಹಾಫಿಸಾಬ್ ಗಳಾದ ಹನೀಫ್, ಹಾಗು ಚಿತ್ತವಾಡಿಗಿ ಜಾಮಿಯಾ ಮಸ್ಜಿದ್ ಕಮಿಟಿಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಕೆರೆಂಗ್ಲಿ ನಜೀರ್ ಅಹಮ್ಮದ್, ಕೊಲ್ಮಿ ಜಾಕಿರ್ ಹುಸ್ಸೇನ್, ಮಳಗಿ ಗೌಸ್, ಅಜಾಂ, ವಿ ಚಾಂದ ಬಾಷ, ಹಾಗು ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಎಮ್. ಫೈರೋಜ್ ಖಾನ್, ಅನ್ಸರ್ ಭಾಷ, ಡಾ.ದುರ್ವೇಶ್ ಮುಯೂದ್ದೀನ್ ಅವರು ಹಾಗೂ ಸಪ್ತಗಿರಿ ಆಸ್ಪತ್ರೆಯ ಅಧಿಕಾರಿಗಳಾದ ವಿಶ್ವನಾಥ್ ರೆಡ್ಡಿ, ಡಾ.ವಿಕ್ರಮ್, ಡಾ.ವರುಣ್, ಡಾ.ನೀಲೇಶ, ಡಾ.ಶೈನೇಶ ಹಾಗು ಅಂಜುವನ್ ಆಸ್ಪತ್ರೆಯ ಸಿಬ್ಬಂದಿಗಳು, ನೂರಾರು ಹಿರಿಯ ನಾಗರೀಕರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.







