ಹೊಸಪೇಟೆ: ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ

ವಿಜಯನಗರ: ಹೊಸಪೇಟೆಯ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಕೆ ಎಂ ಹಾಲಪ್ಪ, "ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬ್ರಿಟೀಷರ ಕಪಿಮುಷ್ಟಿಯಿಂದ ದಾಸ್ಯ ಮುಕ್ತಗೊಳಿಸಿ, ಭಾರತವನ್ನು ವಿಶ್ವಗುರುವಿನ ಮಟ್ಟಕ್ಕೆ ತಲುಪಲು ಅಡಿಪಾಯ ಹಾಕಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನಾಂಕ 28 ಡಿಸೆಂಬರ್ 1885 ರಲ್ಲಿ ದಾದಾ ಬಾಯಿ ನವರೋಜಿ ಹಾಗೂ ಇನ್ನಿತರ ಮಹಾನ್ ನಾಯಕರಿಂದ ಸ್ಥಾಪಿತವಾದ ಕಾಂಗ್ರೆಸ್ ಪಕ್ಷ ಬರಬರುತ್ತಾ, ಈಸ್ಟ್ ಇಂಡಿಯಾ ಆಡಳಿತ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಎಂಬ ಜನಾಂದೋಲನಕ್ಕೆ ಕರೆಕೊಟ್ಟಿತ್ತು. ಕಾಂಗ್ರೆಸ್ ಪಕ್ಷದ ಲಕ್ಷಾಂತರ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದ ಭಾರತ ಬ್ರಿಟೀಷರ ದಬ್ಬಾಳಿಕೆಯಿಂದ ಬಿಡುಗಡೆಗೊಂಡರೂ ಭಾರತದ ಸುವರ್ಣ ಯುಗವನ್ನು ಮರು ಸ್ಥಾಪಿಸಲು ಕಾಂಗ್ರೆಸ್ ಪಕ್ಷವೇ ಮುನ್ನುಡಿ ಬರೆಯಿತು ಎಂದು ಅವರು ಹೇಳಿದರು.
ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ದೇಶದ ಬಗೆಗಿನ ದೂರದೃಷ್ಟಿ ಅವರನ್ನು ಪಂಚವಾರ್ಷಿಕ ಯೋಜನೆಯನ್ನು ದೇಶಕ್ಕೆ ಅರ್ಪಿಸುವಂತೆ ಪ್ರೇರೇಪಿಸಿತು. ಈ ಮೂಲಕ ಭಾರತಕ್ಕೆ ಅತಿಮುಖ್ಯ ಮತ್ತು ಪ್ರಮುಖವಾಗಿ ಬೇಕಾಗಿದ್ದ ಮೂಲಭೂತ ಸೌಕರ್ಯಗಳ ಅನುಷ್ಟಾನಕ್ಕೆ ಮುಂದಾದರು ಎಂದು ಅವರು ಹೇಳಿದರು.
ಸಂವಿಧಾನದ ಆಶಯಗಳೇ ಕಾಂಗ್ರೆಸ್ ಪಕ್ಷದ ಗುರಿ ಮತ್ತು ಧ್ಯೇಯವಾಗಿದೆ ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಕೆ.ರಮೇಶ, ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಮ್ಮನ್ನೆಳ್ಳಪ್ಪ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಬಣ್ಣದ ಮನೆ ಸೋಮಶೇಖರ್, ಪಧವಿಧರರ ವಿಭಾಗದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಅಸಂಘಟಿತ ಕಾರ್ಮಿಕರ ವಿಭಾಗದ ವೆಂಕಟೇಶ್ವರಲು, ಗೋವಿಂದಪ್ಪ , ಅಂತೋಣಿ ದಾಸ್, ಸೇವಾದಳ ನಾಗರಾಜ್, ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಿಂಗಣ್ಣ ನಾಯಕ, ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಕಾರ್ಯದರ್ಶಿ ಭಾಸ್ಕರ, ಮುಖಂಡರಾದ ತಾರಾ ಭಾಷ, ಚಿತ್ತವಾಡ್ಗೆಪ್ಪ, ಪೀರಾ ಸಾಬ್ , ಖಾಜಾ ನಾಗಮ್ಮ , ರುಕ್ಸಾನ, ಜಾಹೀದಾ, ಪರ್ವಿನ್, ಆಶಾ ಬಾನು, ಗಂಗಮ್ಮ, ಉಮಾ, ದಾನಮ್ಮ, ಲಕ್ಷ್ಮೀ ಮತ್ತಿತರರು ಇದ್ದರು







