ಹೊಸಪೇಟೆ | ಉಚಿತ ಕಣ್ಣಿನ ತಪಾಸಣೆ ಶಿಬಿರ

ಹೊಸಪೇಟೆ : ನಗರದ ಚಿತ್ತವಾಡ್ಗಿ ಶಾದಿಮಹಲ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಹಾಗೂ ಜಾಮೀಯ ಮಸ್ಜಿದ್ ಹಾಗೂ ಶಾದಿಮಹಲ್ ಕಮಿಟಿ ಚಿತ್ತವಾಡ್ಗಿ ಮತ್ತು ಅಶ್ವಿನಿ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದಲ್ಲಿ ನೇತ್ರಲಕ್ಷ್ಮಿ ವೈದ್ಯಾಲಯದ ವೈದ್ಯರುಗಳಾದ ಡಾ.ಶ್ರೀನಿವಾಸ್ ದೇಶ ಪಾಂಡೆ ರವರು ಕಣ್ಣುಗಳ ಮಹತ್ವವನ್ನು ಕುರಿತು ಮಾತನಾಡಿದರು.
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಒಟ್ಟು 550 ಜನರು ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡರು. ಅದರಲ್ಲಿ 100 ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಯಿತು ಹಾಗೂ 150 ಜನರಿಗೆ ಕನ್ನಡಕವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎನ್. ಮುಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿದರು.
ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಮೌಲ್ವಿಗಳಾದ ಅಬೂಬಕರ್, ನಗರಸಭಾ ಸದಸ್ಯರಾದ ರಫೀಕ್, ಖಾಜಾ ಹುಸೇನ್ ನಿಯಾಜಿ, ಚಾಂದ್ ಬಾಷ, ಇಂತಿಯಾಝ್, ಜಾಕೀರ್, ಕರೆಂಗಲಿ ನಜೀರ್, ಮೆಹಬೂಬ್ ಸಾಬ್, ಹಾಫಿಸಾಬ್ ಗಳಾದ ಹನೀಫ್, ನೇತ್ರಲಕ್ಷ್ಮಿ ವೈದ್ಯಾಲಯ ಅಶ್ವಿನಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಗೂ ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.







