ಹೊಸಪೇಟೆ | ಬಡವರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ : ಶಾಸಕ ಎಚ್.ಆರ್.ಗವಿಯಪ್ಪ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮ, ಟಿಬಿ ಡ್ಯಾಂ ಸೇರಿದಂತೆ ಎರಡು ನಮ್ಮ ಕ್ಲಿನಿಕ್ ಕೇಂದ್ರಕ್ಕೆ ಕಾಂಗ್ರೆಸ್ ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು .
ಬಳಿಕ ಮಾತಾಡಿದ ಅವರು, ಬಡವರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಹೊಸಪೇಟೆ ತಾಲೂಕಿನ ನಾಲ್ಕು ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡಿದ್ದೇವೆ. 10 ರಿಂದ 15 ಸಾವಿರ ಜನಸಂಖ್ಯೆ ಇರುವ ಜಾಗದಲ್ಲಿ ಪ್ರೈಮರಿ ಹೆಲ್ತ್ ಸೆಂಟರ್ ಓಪನ್ ಮಾಡಿದ್ದೇವೆ. ಎಲ್ಲರಿಗೂ 100 ಹಾಸಿಗೆ ಆಸ್ಪತ್ರೆಗೆ ಹೋಗಲು ಆಗುದಿಲ್ಲ. ಹೀಗಾಗಿ ನಮ್ಮ ಕ್ಲಿನಿಕ್ ಶುರು ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಎಚ್.ಆರ್.ಗವಿಯಪ್ಪ ಅವರು ತಿಳಿಸಿದರು.
Next Story





