ಹೊಸಪೇಟೆ | ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
ಪತ್ರಕರ್ತರು ಸಮಸ್ಯೆಗಳ ಕುರಿತು ನಮ್ಮ ಗಮನಕ್ಕೆ ತನ್ನಿ, ಈಡೇರಿಸುವ ಪ್ರಯತ್ನ ಮಾಡುತ್ತೇವೆ : ಡಿಸಿ ಎಂ.ಎಸ್.ದಿವಾಕರ್

ಹೊಸಪೇಟೆ (ವಿಜಯನಗರ ಜಿಲ್ಲೆ ) : ಪತ್ರಕರ್ತರು ಹೊಸಪೇಟೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಒಳ್ಳೆಯ ವಿಚಾರಗಳನ್ನು ಇಟ್ಟುಕೊಂಡು ನಮ್ಮ ಗಮನಕ್ಕೆ ತರುವ ಕೆಲಸ ಮಾಡಿದರೆ ಸಾಕು ಅದನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಅವರು ಕರ್ನಾಟಕ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕದಿಂದ ನಗರದ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗಿಯಾಗಿ ಪತ್ರಿಕಾ ದಿನಾಚರಣೆ ಉದ್ದೇಶ ಕುರಿತು ಮಾತನಾಡಿದರು.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಮಂಗಳೂರು ಸಮಾಚಾರ ಎನ್ನುವ ಕನ್ನಡ ಪತ್ರಿಕೆಯಿಂದ ಪ್ರಾರಂಭವಾಗಿ ಇಂದು ನೂರಾರು ಪತ್ರಿಕೆಗಳು ಮುದ್ರಣವಾಗಿ ಬರುತ್ತಿವೆ. ಮುಂದುವರೆದು ಸೋಶಿಯಲ್ ಮೀಡಿಯಾಕ್ಕೆ ಬಂದು ನಿಂತಿದೆ. ನನ್ನ ಪ್ರಕಾರವಾಗಿ ಪತ್ರಿಕರು ಮೂರನೇ ಕಣ್ಣು ಇದ್ದ ಹಾಗೆ. ಸಮಾಜದಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸೇರಿ ಕಣ್ಣು ತೆರೆಸುವಂತಹ ಕೆಲಸ ಮಾಡುತ್ತಾರೆ ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾದ ಬಿ.ಹೆಚ್.ಎಸ್.ರಾಜು, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಕರ್ನಾಟಕ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕದ ಖಜಾಂಚಿ ಎಲ್.ಮಂಜುನಾಥ ಮಾತನಾಡಿದರು.
ಸ್ಲಂ ವೆಂಕಿ ಕಾರ್ಯಕ್ರಮದ ನಿರೂಪಣೆ ನಿರ್ವಹಿಸಿದರು, ಎ.ಚಿದಾನಂದ ಸ್ವಾಗತಿಸಿದರು, ಕೆ.ಬಿ.ಹಿರೇಮಠ್ ವಂದನಾರ್ಪಣೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಮಾಜಿ ಯೋಧರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ರಾಮ್ ಜಿ ನಾಯ್ಕ್, ಉಪಾಧ್ಯಕ್ಷರಾದ ವಿ.ಗಾಳೆಪ್ಪ, ರಾಜ್ಯ ಸಮಿತಿ ಸದಸ್ಯ ಬಸವರಾಜ್, ಕೂಡ್ಲಿಗಿ ತಾಲೂಕು ಅಧ್ಯಕ್ಷ ಸಾಲುಮನೆ ರಾಘವೇಂದ್ರ, ಸದಸ್ಯ ರಾದ ಗೀತಾ ಸುರೇಶ್, ಮಹಮ್ಮದ್ ಗೌಸ್, ರಾಜಣ್ಣ ಕಟ್ಟಿಮನಿ, ವಿಜಯವಾಣಿ, ಕೆ.ನೇಹಾ, ಶೇಖರ್, ಭಾಗ್ಯಮ್ಮ ಮಹದೇವ,ಆಸೀಫ್, ಅನಿಲ್, ಕುಮಾರ್ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.