ಹೊಸಪೇಟೆ | ಅಕ್ಕ ಕೆಫೆ ಲೋಕಾರ್ಪಣೆ ಮಾಡಿದ ಸಚಿವ ಝಮೀರ್ ಅಹ್ಮದ್

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಿಲ್ಲಾಧಿಕಾರಿ ಕಚೇರಿ ಬಳಿ ನಿರ್ಮಾಣವಾದ ಅಕ್ಕ ಕೆಫೆಯನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಉದ್ಘಾಟನೆ ಮಾಡಿದರು.
ಡಿಸಿ ಕಚೇರಿಗೆ ಸಮಸ್ಯೆ ಹೊತ್ತು ಬರುವ ಸಾರ್ವಜನಿಕರು ಮತ್ತು ಬಡವರಿಗೆ ಊಟ, ತಿಂಡಿ, ಟೀ, ಕಾಫಿ, ಇತ್ಯಾದಿ ತಿನಿಸುಗಳನ್ನು ಕಡಿಮೆ ದರದಲ್ಲಿ ಕೊಡುವ ಉದ್ದೇಶದಿಂದ ಅಕ್ಕ ಕೆಫೆ ಸ್ಥಾಪಿಸಲಾಗಿದೆ.
ಉದ್ಘಾಟನೆ ವೇಳೆ ಶಾಸಕರಾದ ಕೃಷ್ಣ ನಾಯಕ್, ನೇಮಿರಾಜ್ ನಾಯಕ್, ಎಂ.ಪಿ.ಲತಾ, ಗವಿಯಪ್ಪ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ವಕ್ಫ್ ಅಧ್ಯಕ್ಷರಾದ ದಾದಪಿರ್, ಹೂಡಾ ಅಧ್ಯಕ್ಷ ಇಮಾಮ್ ನಿಯಾಜಿ, ಡಿಸಿ ದಿವಾಕರ್, ಸಿಇಓ ಅಕ್ರಂಷಾ, ಎಸ್.ಪಿ ಅರಣಾಂಗ್ಷು ಗಿರಿ ಸೇರಿ ಇತರರು ಹಾಜರಿದ್ದರು.
Next Story







