ಹೊಸಪೇಟೆ | ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ

ಹೊಸಪೇಟೆ : ಈದ್ ಮಿಲಾದ್, ಗಣೇಶ ಚತುರ್ಥಿ ಎರಡು ಹಬ್ಬಗಳು ಒಟ್ಟಿಗೆ ಇರುವುದರಿಂದ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕೆಂದು ವಿಜಯನಗರ ಜಿಲ್ಲಾ ಪ್ರಭಾರ ಎಸ್ಪಿ ಅರುಣಾಂಗ್ಷಿ ಗಿರಿ ಹೇಳಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಪಟ್ಟಣ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಹಿಂದೂ-ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದ ಎಸ್ಪಿ ಅರುಣಾಂಗ್ಷಿ ಗಿರಿ ಅವರು, ಯಾರು ಕೂಡ ಪಿಓಪಿ ಗಣೇಶ್ ಮೂರ್ತಿ ಬಳಸದೇ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಪ್ಲೆಕ್ಸ್, ಬಟಿಂಗ್ಸ್ ಹಾಕಬೇಕಾದರೆ ಅನುಮತಿ ಪಡೆಯಬೇಕು. ಒಂದು ಧರ್ಮಕ್ಕೆ ತೊಂದರೆ ಕೊಡದಂತೆ ಹಬ್ಬ ಆಚರಿಸಬೇಕು ಎಚ್ಚರಿಕೆ ನೀಡಿದರು.
ಈ ವೇಳೆ ಹೊಸಪೇಟೆ ನಗರಸಭೆ ಪೌರಾಯುಕ್ತ ಶಿವಕುಮಾರ ಯರಗುಡಿ, ಹೊಸಪೇಟೆ ವಿಭಾಗದ ಡಿವೈಎಸ್ಪಿ ಮಂಜುನಾಥ ಸೇರಿದಂತೆ ಸಿಪಿಐ, ಪಿಎಸ್ಐಗಳು ಹಾಗೂ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.
Next Story





