ಹೊಸಪೇಟೆ | ಬೈಕ್ ಡಿವೈಡರ್ಗೆ ಢಿಕ್ಕಿ : ಇಬ್ಬರಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ
ಹೊಸಪೇಟೆ : ಡಿವೈಡರ್ಗೆ ಬೈಕ್ ಢಿಕ್ಕಿಯಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸಮಲಪನಗುಡಿ ಗ್ರಾಮದ ಬಳಿ ನಡೆದಿದೆ.
ನಗರದ ನಾಗೇನಹಳ್ಳಿ ಗ್ರಾಮದಿಂದ ಹೊಸಪೇಟೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹೊಸಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





