ಹೊಸಪೇಟೆ | ಅಲ್ಪಸಂಖ್ಯಾತರ ಜಾಗೃತಿ ಕಾರ್ಯಕ್ರಮ

ಹೊಸಪೇಟೆ: ನಗರದ ಅಂಜುಮನ್ ಶಾದಿ ಮಹಲ್ ನಲ್ಲಿ ಕೆಪಿಸಿಸಿ ಜಿಲ್ಲಾಧ್ಯಕ್ಷರಾದ ಸಿರಾಜ್ ಶೇಖ್ ರವರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಮಾಜಿ ವಕ್ಫ್ ಅಧ್ಯಕ್ಷರಾದ ಅನ್ವರ್ ಭಾಷಾ, ವಿಜಯನಗರ ಜಿಲ್ಲಾ ವಕ್ಫ್ ಅಧ್ಯಕ್ಷರಾದ ದದಾಪಿರ್, ಅಂಜುಮನ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಇಮಾಮ ನಿಯಾಜಿ, ನಗರಸಭೆ ಸದಸ್ಯರಾದ ಅಸ್ಲಾಂ ಮಳಗಿ, ಕೂಡ್ಲಿಗಿ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೈಯದ ಶುಕುರ್, ಮತ್ತು ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಸ್ಜಿದ್ ಕಮಿಟಿ ಸದಸ್ಯರು ಹಾಗು ಕಾಂಗ್ರೆಸ್ ಮುಸ್ಲಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜ್ಯ ಸರ್ಕಾರದಿಂದ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆ ಸೇರಿದಂತೆ ಕರ್ನಾಟಕ ಮುಸ್ಲಿಂ ಕಾರ್ಪೊರೇಷನ್ ವತಿಯಿಂದ ಮುಸ್ಲಿಂ ಸಮಾಜಕ್ಕೆ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ನಮ್ಮ ಸಮುದಾಯದ ಮುಸ್ಲಿಂ ಸಮಾಜದವರಿಗೆ ಯೋಜನೆಗಳ ಮಾಹಿತಿ ದೊರಕುತ್ತಿಲ್ಲ ಈ ಕಾರ್ಯಕ್ರಮದಲ್ಲಿ ನಮ್ಮ ಸರ್ಕಾರದಿಂದ ಬರುವ ಶಿಕ್ಷಣ, ಆರೋಗ್ಯ, ಉದ್ಯೋಗ, ಸ್ಮಾಲ್ ಇಂಡಸ್ಟ್ರೀಸ್ ಸ್ಕಿಲ್ ಗೆ ಸಂಬಂಧಪಟ್ಟಂತೆ ಈ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ತಿಳಿಸಿದರು.
ಮುಸ್ಲಿಂ ಸಮಾಜದವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಅಲ್ಲಿಯ ಮೂಲಭೂತ ಸೌಕರ್ಯ ಮತ್ತು ಸಮಸ್ಯೆಗಳನ್ನು ಪರಿಶೀಲಿಸಬೇಕು ಮತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಮಾಹಿತಿಯ ಕೊರತೆಯಿಂದ ಯೋಜನೆಗಳಿಗೆ ಸಂಬಂಧಪಟ್ಟಂತೆ ಫಲಾನುಭವಿಗಳು ಸಿಗುತ್ತಿಲ್ಲ. ಮೊದಲಿಗೆ ಪ್ರಚಾರದ ಮೂಲಕ ಯೋಜನೆಗಳನ್ನು ಕಾರ್ಯರೂಪಕ್ಕೆ ತನ್ನಿ.
-ಸಿರಾಜ್ ಶೇಖ್, ಕೆಪಿಸಿಸಿ ವಿಜಯನಗರ ಜಿಲ್ಲಾಧ್ಯಕ್ಷ
ಹೊಸಪೇಟೆಯಲ್ಲಿ ನಡೆದ ಮೈನಾರಿಟಿ ಜಾಗೃತಿ ಕಾರ್ಯಕ್ರಮಕ್ಕೆ ಹಿರಿಯ ನಾಯಕರನ್ನು ಬಿಟ್ಟು ರಾಜಕೀಯದಲ್ಲಿ ನಾವೇ ಈ ಜಿಲ್ಲೆಗೆ ಉಸ್ತುವಾರಿ ಎಂದು ತೋರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಯುತ್ತದೆ. 1994-95 ರಲ್ಲಿ ದೇವೇಗೌಡ ರವರ ನೇತೃತ್ವದಲ್ಲಿ ನಮ್ಮ ತಂದೆ ಎನ್.ಎಮ್.ನಬಿ ಸಬ್ ಕ್ಯಾಬಿನೆಟ್ ಮಿನಿಸ್ಟರ್ ಆದಾಗ ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ಕಾರ್ಯರೂಪಕ್ಕೆ ತಂದಿದ್ದು, ನಮ್ಮ ಸಮುದಾಯಕ್ಕೆ ನಮ್ಮ ತಂದೆಯವರ ಕೊಡುಗೆ ಅಪಾರವಿದೆ. ಇಂತಹ ಹಿರಿಯ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇಂತಹ ಕಾರ್ಯಕ್ರಮಗಳು ಸರಿಯಾದ ಪ್ರೋಟಕಾಲ್ ಮೂಲಕ ಆಯೋಜಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದನ್ನು ಪರಿಶೀಲಿಸಬೇಕೆಂದು ಪತ್ರಿಕೆಯ ಮುಖಾಂತರ ಮನವಿ ಮಾಡಿಕೊಳ್ಳುತ್ತೇನೆ.
-ಎನ್.ಎಂ.ನೂರ್ ( ಅಖಂಡ ಬಳ್ಳಾರಿ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ )







