ಹೊಸಪೇಟೆ | ಸಂಚಾರ ಪೊಲೀಸ್ ಠಾಣೆಯ ಎಸ್ಐ ಶೇಷಾಚಲಂ ನಾಯ್ಡುಗೆ ವಯೋನಿವೃತ್ತಿ ಬೀಳ್ಕೊಡುಗೆ

ವಿಜಯನಗರ (ಹೊಸಪೇಟೆ) :ಹೊಸಪೇಟೆ ನಗರದ ಸಂಚಾರ ಪೊಲೀಸ್ ಠಾಣೆಯ ಎಸ್ಐ ಶ್ರೀ ಶೇಷಾಚಲಂ ನಾಯ್ಡು ಅವರ ವಯೋನಿವೃತ್ತಿ ಕಾರ್ಯಕ್ರಮವನ್ನು ನಗರದ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು, ಬಂಧುಬಳಗ ಹಾಗೂ ಸ್ನೇಹಿತರು ಭಾಗವಹಿಸಿ, ಶ್ರೀ ಶೇಷಾಚಲಂ ನಾಯ್ಡು ಅವರ ದೀರ್ಘಕಾಲದ ಸೇವೆ, ಶಿಸ್ತುಬದ್ಧ ಕಾರ್ಯಶೈಲಿ ಹಾಗೂ ಪೊಲೀಸ್ ಇಲಾಖೆಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು.
ತಮ್ಮ ವೃತ್ತಿ ಜೀವನದಲ್ಲಿ ಸಂಚಾರ ನಿಯಂತ್ರಣ, ಸಾರ್ವಜನಿಕ ಸೇವೆ ಮತ್ತು ಶಿಸ್ತು ಕಾಪಾಡುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಮೆಚ್ಚಿ, ಭಾಗವಹಿಸಿದ್ದ ಗಣ್ಯರು ಭಾವಪೂರ್ಣವಾಗಿ ಬೀಳ್ಕೊಡುಗೆ ನೀಡಿ ಶುಭ ಹಾರೈಸಿದರು.
Next Story





