ಹೊಸಪೇಟೆ | ಬಸ್ ವ್ಯವಸ್ಥೆ ಕಲ್ಪಿಸಲು ಎಸ್‌ಎಫ್‌ಐನಿಂದ ಮನವಿ

ಹೊಸಪೇಟೆ | ಬಸ್ ವ್ಯವಸ್ಥೆ ಕಲ್ಪಿಸಲು ಎಸ್‌ಎಫ್‌ಐನಿಂದ ಮನವಿ
ಹೊಸಪೇಟೆ :ಕಮಲಾಪುರ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು, ಕಾಲೇಜು ಆವರಣದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸುವಂತೆ ಹಾಗೂ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಕಮಲಾಪುರದ ಪುರಸಭೆಯ ಮುಖ್ಯಧಿಕಾರಿಗಳಾದ ಡಿ.ಈರಣ್ಣ ಮತ್ತು ಬಸ್ ನಿಲ್ದಾಣ ಅಧಿಕಾರಿಗಳು ಪಿ.ವಾಸುದೇವ್ ಕೆಡಿಪಿ ಮೆಂಬರ್ ಕಾಳಪ್ಪ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ SFI ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವರೆಡ್ಡಿ ಮಾತನಾಡಿ, ಕಮಲಾಪುರುದ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಕಮಲಾಪುರುದ ಕಾಲೇಜಿಗೆ ಬರುತ್ತಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ SFI ಅಗ್ರಹಿಸುತ್ತದೆ ಎಂದು ಒತ್ತಾಯಿಸಿದರು
ಈ ವೇಳೆ SFI ಜಿಲ್ಲಾ ಸಹಕಾರ್ಯದರ್ಶಿಯಾದ ಕೆ.ಎ. ಪವನ್ ಕುಮಾರ್ ಮಾತನಾಡಿದರು.
SFI ಬೇಡಿಕೆಗಳು :
1. ನಲ್ಲಾಪುರು ದಿಂದ ಕಮಲಾಪುರಕ್ಕರ( ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4 ಗಂಟೆಗೆ) ಬಸ್ ಬಿಡುವುದು.
2. ಏನ್. ಆರ್ ಕ್ಯಾಂಪ್ ದಿಂದ ಕಮಲಾಪುರಕ್ಕೆ(ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4:00 ಗಂಟೆಗೆ)
3. ಕೇರೆ ತಾಂಡ ದಿಂದ ಕಮಲಾಪುರಕ್ಕೆ(ಬೆಳಿಗ್ಗೆ 9:00 ಗಂಟಿಗೆ ಮತ್ತು ಸಾಯಂಕಾಲ 4:00 ಗಂಟೆಗೆ)
4. ಸುಗ್ಗಿನಳ್ಳಿ ಯಿಂದ ಕಮಲಾಪುರ(ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4 ಗಂಟೆಗೆ )
5. ಕಮಲಾಪುರ TO ಚಿನ್ನಪುರು (ಸಾಯಂಕಾಲ 4:00 ಗಂಟೆಗೆ)
6. 76 ವೆಂಕಟಪುರು ದಿಂದ ಕಮಲಾಪುರ(ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4:00 ಗಂಟೆಗೆ)
7. ಕ್ರೀಡಾಂಗಣ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ಪುರಸಭೆ ಅನುದಾನದಲ್ಲಿ ನೀಡಬೇಕು.
ಈ ಸಂದರ್ಭದಲ್ಲಿ ಕಾಲೇಜು ಘಟಕದ ಅಧ್ಯಕ್ಷರಾದ ಹರಿಪ್ರಿಯಾ, ಕಾರ್ಯದರ್ಶಿಯಾದ ದುರ್ಗೇಶ್, ಉಪಾಧ್ಯಕ್ಷರಾದ ಸುಭಾಸ್, ಸುಲಚನ, ಮೋಹಿನಿ ಶ್ರೀನಿಧಿ, ಸಹಕಾರ್ಯದರ್ಶಿಗಳಾದ ಕೇಶವ, ರಮೇಶ್, ಅಜಯ ಸದ್ಯಸರಾದ ವೀರೇಶ್, ನಾಗರಾಜ್, ಮಾರೆಮ್ಮ ಮತ್ತು ಇತರರು ನುರೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು.







