ಕೂಡ್ಲಿಗಿಯಲ್ಲಿ ‘ಜನಸ್ಪಂದನ’, ‘ಮನೆ ಮನೆಗೆ ನಮ್ಮ ಶಾಸಕರು’ ಕಾರ್ಯಕ್ರಮ

ವಿಜಯನಗರ (ಹೊಸಪೇಟೆ–ಕೂಡ್ಲಿಗಿ): ತಾಲೂಕಿನ ಸೋಲದಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಕೂಡ್ಲಿಗಿ ಇವರ ಸಂಯುಕ್ತ ಆಶ್ರಯದಲ್ಲಿ “ಜನಸ್ಪಂದನ” ಮತ್ತು “ಮನೆ ಮನೆಗೆ ನಮ್ಮ ಶಾಸಕರು – ಮನೆ ಬಾಗಿಲಿಗೆ ನಮ್ಮ ಸರ್ಕಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಶ್ರೀನಿವಾಸ್ ಎನ್.ಟಿ.ಅವರು, ಕ್ಷೇತ್ರದ ಜನರಿಗೆ ಸರ್ಕಾರದ ವಿವಿಧ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ. ತಾಲೂಕು ಆಡಳಿತವನ್ನು ಗ್ರಾಮಮಟ್ಟಕ್ಕೆ ಕೇಂದ್ರೀಕರಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ ಪರಿಹಾರ ನೀಡುವುದು ಈ ಕಾರ್ಯಕ್ರಮದ ಮೂಲ ತತ್ವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಅಧಿಕಾರಿಗಳಾದ ಕವಿತಾ ಎಸ್. ಮನ್ನಿಕೇರಿ, ತಹಶೀಲ್ದಾರ್ ಕುಮಾರಿ ನೇತ್ರಾವತಿ, ಎ.ಇ.ಇ ಮಲ್ಲಿಕಾರ್ಜುನ, ಇ.ಒ ನರಸಪ್ಪ, ಬಿ.ಒ ಮೈಲೇಶ ಬೆವೂರು, ಟಿ.ಹೆಚ್.ಓ ಪ್ರದೀಪ್, ಎ.ಇ.ಇ ನಾಗನಗೌಡ, ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀ ಕಾವಳ್ಳಿ ಶಿವಪ್ಪನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಹಿರಿಯ ಮುಖಂಡರು ನಾಗರಕಟ್ಟೆ ರಾಜಣ್ಣ, ಶಶಿಧರ ಸ್ವಾಮಿ, ಅಜ್ಜನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರತ್ನಮ್ಮ, ಉಪಾಧ್ಯಕ್ಷರು, ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.







