ಅರಸೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಪಿ.ಕೆಂಚವ್ವ ಅವಿರೋಧ ಆಯ್ಕೆ

ಅರಸೀಕೆರೆ: ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಗ್ರಾಮದ ವಾರ್ಡ್ ಸಂಖ್ಯೆ 03 ರ ಸದಸ್ಯೆ ಶ್ರೀಮತಿ ಪಿ. ಕೆಂಚವ್ವ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಾಲಮ್ಮ ನಾಗರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಪಿ. ಕೆಂಚವ್ವ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ತಹಶೀಲ್ದಾರ ಗಿರೀಶ್ ಬಾಬು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ, ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷೆ ಪಿ. ಕೆಂಚವ್ವ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ಗಳನ್ನು ನಾನು ಅಭಿವೃದ್ಧಿ ಪಡಿಸುತ್ತೇನೆ, ವಾರ್ಡ್ಗಳ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಅಂಜಿನಪ್ಪ ಮತ್ತು ಎಲ್ಲಾ ಸದಸ್ಯರ ಸಲಹೆಗಳ ಮೂಲಕ ನಮ್ಮ ಗ್ರಾಮವನ್ನು ತಾಲ್ಲೂಕಿನಲ್ಲೇ ಮಾದರಿ ಗ್ರಾಮ ಪಂಚಾಯಿತಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ನೂತನವಾಗಿ ಅರಸೀಕೆರೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅರಸೀಕೆರೆ ಮೂರನೇ ವಾರ್ಡ್ ಸದಸ್ಯೆ ಶ್ರೀಮತಿ ಪಿ. ಕೆಂಚವ್ವ ಅವರನ್ನು ಹೊಸಪೇಟೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮತ್ತು ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಅರಸೀಕೆರೆ ವೈ. ಡಿ. ಅಣ್ಣಪ್ಪ ಸಾಹುಕಾರ್ ಮತ್ತು ಯುವ ಮುಖಂಡರಾದ ಪ್ರಶಾಂತ್ ಪಾಟೀಲ್ ಸೇರಿ ಇತರರು ಅವರನ್ನು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ನಂದ್ಯಮ್ಮ ದಂಡ್ಯಪ್ಪ, ಸದಸ್ಯರಾದ ಕೆ. ಆನಂದಪ್ಪ, ವಿ.ಟಿ. ಮಲ್ಲೇಶ್,
ಫಾರ್ಜಾನ್ ಭಾನು, ವೈ, ರೇಖಾ, ಲಕ್ಷ್ಮಿ ವೆಂಕಟೇಶ್, ಕೆ, ಮಹಾಂತೇಶ್, ಎಂ, ಚಂದ್ರಪ್ಪ, ಇನಾಯತ್ ಉಲ್ಲಾ, ಡಿ. ಅಕ್ಕಮ್ಮ, ಅಡ್ಡಿ ಚನ್ನವೀರಪ್ಪ,ಮುತ್ತಿಗಿ ಹನುಮಂತಪ್ಪ, ಅದಮ್ ಸಾಬ್, ಟಿ. ವಿಶಾಲ ಮುಖಂಡರಾದ ಐ.ಸಲಾಂ ಸಾಬ್,ವಕೀಲರಾದ ವೈ. ಟಿ. ಕೊಟ್ರೇಶ್, ಪೂಜಾರ್ ಮರಿಯಪ್ಪ, ಕೆ. ಯೋಗೇಶ್, ರಂಗಪ್ಪ, ಮುಗೇಶ್, ಯುವ ಮುಖಂಡ ಹೆಚ್. ನವೀನ್, ಪಿಡಿಓ ಅಂಜಿನಪ್ಪ ಸೇರಿ ,ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ವಾರ್ಡ್ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.