ವಿಜಯನಗರ: ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಮನವಿ

ವಿಜಯನಗರ: ವಕ್ಫ್ ಕಾಯಿದೆ 1995ರ ಇತ್ತಿಚೆಗೆ ಅಂಗೀಕರಿಸಲಾದ ತಿದ್ದುಪಡಿಗಳನ್ನು ಹಿಂಪಡೆಯಲು ಆಗ್ರಹಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಇತ್ತೀಚೆಗೆ 1995ರ ಕಾಯ್ದೆಗೆ ಅಂಗೀಕರಿಸಲಾದ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಭಾರತದ ಸಂವಿಧಾನದಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಈ ತಿದ್ದುಪಡಿಗಳು ಸಂವಿಧಾನದ 14, 25 ,26 ,ಮತ್ತು 29ನೆಯ ವಿಧಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಆದ್ದರಿಂದ ಹೊಸಪೇಟೆಯ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ವತಿಯಿಂದ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಈ ಎಲ್ಲಾ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಗೌರವದೊಂದಿಗೆ ರಾಷ್ಟ್ರಪತಿಯವರಲ್ಲಿ ವಿನಂತಿಸುತ್ತಾ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ನ ವಿಜಯನಗರ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಅಜೀಜ್, ಮತ್ತು ಸೈಯದ್ ನಾಜಿಮುದ್ದೀನ್, ಮುಸ್ಲಿಂ ಮುಖಂಡರು ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭ ಎಚ್ಎನ್‌ಎಫ್ ಇಮಾಮ್ ನೀಯಾಜಿ ಅಧ್ಯಕ್ಷರು ಹೊಸಪೇಟೆ ಅಂಜುಮನ್ ಕಮಿಟಿ ಮತ್ತು ಸೈಯದ್ ನಾಜಿಮುದ್ದೀನ್ ಅಧ್ಯಕ್ಷರು ಜಮಿಯತೆ ಉಲೇಮಾ ಎ ಹಿಂದ್ ವಿಜಯನಗರ ಜಿಲ್ಲೆ, ಕಲೀಮುಲ್ಲಾ ಖಾನ್ ಮಂಸೂರಿ ಜಮಾಅತ್ ಇಸ್ಲಾಮಿ ಹಿಂದ್ ವಿಜಯನಗರ ಜಿಲ್ಲೆ, ಮತ್ತು ಮೊಹಮ್ಮದ್ ಅಜೀಜ್ ಮುಲ್ಲಾ ಅಧ್ಯಕ್ಷರು ಜಮಾಅತ್ ಇಸ್ಲಾಮಿ ಹಿಂದ್, ನಜೀರ್ ಖಾನ್, ಹೊಸಪೇಟೆ ಮತ್ತು ಹಲವರು ಭಾಗವಹಿಸಿದರು.





