ಜೂ.14ರಂದು ಹೊಸಪೇಟೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ವಿಜಯನಗರ(ಹೊಸಪೇಟೆ) : ನಗರದ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.14 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿತರಣಾ ಕೇಂದ್ರದ ವ್ಯಾಪ್ತಿಗೊಳಪಡುವ ಬಸವೇಶ್ವರ ಬಡವಾಣೆ, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ಡಾ.ಪುನೀತ್ ರಾಜಕುಮಾರ್ ಸರ್ಕಲ್, ರಾಜೀವ ನಗರ, ರೈಲ್ವೆ ಸ್ಟೇಷನ್, ಅಮರಾವತಿ, ಚಿತ್ತವಾಡಗಿ, ಶುಗರ್ ಫ್ಯಾಕ್ಟರಿ, ಹಂಪಿ ರೋಡ್, ಗಣೇಶ್ ಗುಡಿ, ನೌಕರ ಕಾಲೋನಿ, ಗಾಂಧಿ ಸರ್ಕಲ್, ಬಸ್ ಸ್ಟಾಂಡ್, ಮೇನ್ ಬಜಾರ್, ಕೋರ್ಟ್, ರಾಣಿಪೇಟೆ, ಭಟ್ರಹಳ್ಳಿ, ಬೆನಕಾಪುರ, ಬಸವನದುರ್ಗ, ನಾಗೇನಹಳ್ಳಿ, ಹಾಗೂ ನರಸಾಪುರ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಬೇಕು ಎಂದು ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





