ಮೇ 11ರಂದು ಹೊಸಪೇಟೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ

ವಿಜಯನಗರ(ಹೊಸಪೇಟೆ) : ಹೊಸಪೇಟೆಯ ಸಂಕ್ಲಾಪುರದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳ ಬೇಕಾಗಿರುವುದರಿಂದ ಮೇ 11 ರಂದು ಭಾನುವಾರ, ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಎಫ್ 6 ಸಂಕ್ಲಾಪುರ ಮತ್ತು ಜಂಬುನಾಥ ಗುಡಿ ಮಾರ್ಗಗಳ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಅಡಚಣೆಯಾಗುತ್ತದೆ.
ತಾಲೂಕಿನ ಕಾರಿಗನೂರು, ಸಂಕ್ಲಾಪುರ, ಮಾರುತಿ ನಗರ, ಜಂಬುನಾಥ ರಸ್ತೆ ಮತ್ತು ಜಂಬನಾಥ ಗುಡಿ ವ್ಯಾಪ್ತಿಯಲ್ಲಿರುವ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಹೊಸಪೇಟೆ ನಗರ ಉಪವಿಭಾಗದ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಹೇಮರೆಡ್ಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story