ಹೊಸಪೇಟೆ: ವಕೀಲರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

ಹೊಸಪೇಟೆ: ವಕೀಲರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಅಖಿಲ ಭಾರತ ವಕೀಲರ ಸಂಘ ( ಎ ಐ ಎಲ್ ಯು ) ಹೊಸಪೇಟೆ ತಾಲೂಕು ಸಮಿತಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಮುಖಂಡರಾದ ಎ.ಕರುಣಾನಿಧಿ, ರಾಜ್ಯ ಸರ್ಕಾರ ವಕೀಲರ ಸಂರಕ್ಷಣೆ ಕಾಯ್ದೆ ತಂದಿದ್ದರೂ ಅದರಿಂದ ಯಾವುದೇ ಪ್ರಯೋಜನ ಇಲ್ಲ. ಅದು ಕೇವಲ ಕಕ್ಷಿದಾರರಿಂದ ಮಾತ್ರವೇ ರಕ್ಷಣೆ ನೀಡುತ್ತದೆ ಹೊರತು, ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ರಕ್ಷಣೆ ನೀಡುವುದಿಲ್ಲ. ಹೀಗಾಗಿ ತಕ್ಷಣವೇ ಸರ್ಕಾರ ವಕೀಲರ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು. ರಾಜ್ಯದ ಎಲ್ಲಾ ತಾಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ರೂ.5 ಲಕ್ಷ ಅನುದಾನ ಮಂಜೂರು ಮಾಡಬೇಕು ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ರೂ.10 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಬೇಕು. ವಕೀಲರಿಗೆ ವೈದ್ಯಕೀಯ ಹಾಗೂ ಜೀವ ವಿಮೆ ನೀಡಬೇಕು, ಜಿಲ್ಲಾ ಮಟ್ಟದಲ್ಲಿ ಅಕಾಡೆಮಿ ಗಳನ್ನು ಸ್ಥಾಪಿಸಬೇಕು ಮತ್ತು ಇತರೆ ವಕೀಲರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ನಮ್ಮ ಈ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ವಿಫಲರಾದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಎಂದು AILU ರಾಜ್ಯ ಸಮಿತಿ ಸದಸ್ಯರಾಗದ ಬಿಸಾಟಿ ಮಹೇಶ್ ಎಚ್ಚರಿಕೆ ನೀಡಿದರು.
AILU ರಾಜ್ಯ ಸಮಿತಿ ಸದಸ್ಯರಾದ ಬಿಸಾಟಿ ಮಹೇಶ್, ಮುಖಂಡರಾದ ಕಲ್ಯಾಣಯ್ಯ, ಹೆಚ್.ವೆಂಕಟೇಶ, ಮರಿಯಪ್ಪ, ವಕೀಲರಾದ ರಾಮಣ್ಣ, ಕೊಳಗಲ್ಲು ವೆಂಕಟೇಶ, ಕಟಗಿ ಜಂಬಯ್ಯ, ರಾಘವೇಂದ್ರ, ಅಶ್ವತ್ಥ, ಕೆ.ಬಸವರಾಜ, , ಶಿವಕುಮಾರ್, ರಾಜೇಶ್, ಮದನ್ ಇತರ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮನವಿ ಪತ್ರವನ್ನು ತಾಲ್ಲೂಕು ತಹಶಿಲ್ದಾರರಾದ ಶೃತಿ ಯವರು ಸ್ವೀಕರಿಸಿದರು.







