ಸಂವಿಧಾನವು ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಮುನ್ನೆಲೆಗೆ ಬರಲು ಅವಕಾಶವನ್ನು ಕಲ್ಪಿಸಿದೆ : ಶಾಸಕಿ ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ: ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾತಂತ್ರವಾಗಿ ಜೀವಿಸಲು ಅನುವು ಮಾಡಿಕೊಡುವ ದೃಷ್ಟಿಯಿಂದ ಡಾ ಬಿ ಆರ್ ಅಂಬೇಡ್ಕರ್‌ರವರು ಸಂವಿಧಾನವನ್ನು ರಚಿಸಿದ್ದಾರೆ ಎಂದು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಥಸಂಚಲನ ನಡೆಸಿ ಮಾತನಾಡಿದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್, ಮೇಲು ಕೀಳೆಂಬ ಭಾವನೆಯನ್ನು ತೋರದೆ ಎಲ್ಲರನ್ನು ಸಮಾನವಾಗಿ ಕಾಣುವುದು ಸಂವಿಧಾನದ ಮೂಲ ಉದ್ದೇಶವಾಗಿದೆ. ಸಂವಿಧಾನ ರಚನೆಯ ನಂತರ ದೇಶದಲ್ಲಿ ಮಹಿಳೆಯು ಹಂತ-ಹಂತವಾಗಿ ಎಲ್ಲಾ ಕ್ಷೇತ್ರದಲ್ಲಿ ತನ್ನದೆ ಆದ ಸಾಮರ್ಥ್ಯವನ್ನು ಸಾಬೀತು ಪಡಿಸಿ ಮುನ್ನೆಲೆಗೆ ಬರಲು ಕಾರಣವಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಟಿ ಸುರೇಶ್ ಕುಮಾರ್ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ಅಖಂಡ ಭಾರತ ಪಾಲನೆ ಮಾಡುತ್ತಿದೆ, ಸರ್ವರಿಗೂ ಸಮಾನತೆ ನೀಡಿದೆ, ಯಾವುದೇ ತಂತ್ರಜ್ಞಾನವಿಲ್ಲದೆ ಕೈಬರಹದ ಮೂಲಕ ನಮ್ಮ ಸಂವಿಧಾನ ರಚನೆಗೊಂಡಿದೆ.
ಸಂವಿಧಾನ ಯಾವುದೇ ವ್ಯಕ್ತಿಯ ಸ್ವತ್ತಲ್ಲ, ಅದು ಸರ್ವರಿಗೂ ಸೇರಿದ್ದು, ಭಾರತದ ಅಖಂಡತೆ, ಜಾತ್ಯಾತೀತತೆ, ಹಾಗೂ ಸಮಾನತೆಯನ್ನು ಸಂವಿಧಾನದಲ್ಲಿ ಕಾಣಬಹುದಾಗಿದೆ, ಸಂವಿಧಾನದ ಮೂರು ಪ್ರಮುಖ ಅಂಗಗಳಲ್ಲಿ ಒಂದಕ್ಕೊಂದು ತತ್ತುಗಳು ಸಂಭವಿಸಿದಾಗ, ತಿದ್ದುಪಡಿ ಮಾಡಲು ಅವಕಾಶ ವಿರುತ್ತದೆ ಸಂವಿಧಾನದ ಆಶಯದಂತೆ ನಾವೆಲ್ಲರೂ ಜೀವಿಸೋಣ ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಬಿ ವಿ ಗಿರೀಶ್ ಬಾಬು, ನಗರಸಭೆ ಪ್ರಭಾರ ಪೌರಾಯುಕ್ತೆ ರೇಣುಕಾ ಎಸ್ ದೇಸಾಯಿ, ಬಿಇಓ ಲೇಪಾಕ್ಷಪ್ಪ ಎಚ್, ತಾಲೂಕು ಪಂಚಾಯತ್ ಇಓ ಚಂದ್ರಶೇಖರ್ ವೈ ಎಚ್, ಸಮಾಜ ಕಲ್ಯಾಣಾಧಿಕಾರಿ ಗಂಗಪ್ಪ, ಪರಿಶಿಷ್ಟ ಪಂಗಡಗಳ ಇಲಾಖಾಧಿಕಾರಿ ಭೀಮಪ್ಪ, ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯ್ ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







