ವಿಜಯನಗರ | 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ವಿಜಯನಗರ: ಆಯುರ್ವೇದವು ಭಾರತೀಯ ಪರಂಪರೆಯ ಮೂಲ ವೈದ್ಯಕೀಯ ಪದ್ಧತಿಯಾಗಿದ್ದು, ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಉದ್ದೇಶ ಎಂದು ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಂಗಳವಾರ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಆಯುಷ್ ಫೆಡೆರೇಷನ್ ಆಫ್ ಇಂಡಿಯಾ (ಎಎಫ್‌ಐ) ಜಿಲ್ಲಾ ಘಟಕ ಮತ್ತು ಪತಂಜಲಿ ಯೋಗ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಧನ್ವಂತರಿ ಜಯಂತಿ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನ ಎಂದು ಆಚರಿಸಲಾಗುತ್ತದೆ ಎಂದು ಶಿವಮೂರ್ತಿ ಅವರು ಹೇಳಿದರು
ಡಾ.ಕೇದಾರೇಶ್ವರ ದಂಡಿನ್ ಅವರು, ಆಯುರ್ವೇದವು ನೈಸರ್ಗಿಕ ಗಿಡಮೂಲಿಕೆ, ಆಹಾರ ಪದ್ಧತಿ, ಮಸಾಜ್, ಯೋಗ ಮುಂತಾದ ಮಾರ್ಗಗಳಿಂದ ದೇಹವನ್ನು ಒಳಗಿನಿಂದ ಬಲಪಡಿಸಿ ಕಾಯಿಲೆಗಳನ್ನು ಗುಣಪಡಿಸುವುದಾಗಿ ಹೇಳಿದರು.
ಡಾ.ಕೆ.ಹೆಚ್.ಗುರುಬಸವರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಮುನಿವಾಸುದೇವ ರೆಡ್ಡಿ, ಡಾ.ಬಿ.ವಿ. ಭಟ್, ಡಾ.ಪ್ರಸಾದ್ ಬಾಬು, ಡಾ.ಶೈಲೇಂದ್ರ ಪ್ರತಾಪ್ ಸಿಂಗ್, ಡಾ.ರಾಧಾ ಗುರುಬಸವರಾಜ್, ಡಾ.ಚೇತನ್, ಡಾ.ಸಿಕಂದರ್, ಡಾ.ಹಾಲಮ್ಮ, ಡಾ.ಚಂದ್ರಶೇಖರ್ ಶೆಟ್ಟಿ, ಡಾ.ಬಳಗಾನೂರು ಮಂಜುನಾಥ್, ಡಾ.ಸರಸ್ವತಿ ಕೋಟೆ, ಡಾ.ಹೇಮಲತಾ, ಡಾ.ರೂಪ್ ಸಿಂಗ್ ರಾಥೋಡ್, ಡಾ.ಶಿವಶರಣಯ್ಯ, ಡಾ.ಆರತಿ ಹಿರೇಮಠ್, ಡಾ.ಅಶೋಕ್, ಡಾ.ಮಂಜುನಾಥ್ ಹನಸಿ, ಡಾ.ಯಶ್ವಂತ್, ಡಾ.ಧೀರಜ್, ಡಾ.ಸಾಕ್ಷಿ ಮತ್ತು ಪತಂಜಲಿ ಯೋಗ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.







