ವಿಜಯನಗರ | ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸ ಟಿಬಿ ಕಾಯಿಲೆಯ ತ್ವರಿತ ಪತ್ತೆಯ ಕಫ ಪರೀಕ್ಷೆ ಯಂತ್ರ ಲೋಕಾರ್ಪಣೆ

ವಿಜಯನಗರ (ಹೊಸಪೇಟೆ) : ನಗರ ಡ್ಯಾಮ್ ರಸ್ತೆಯಲ್ಲಿರುವ (ವಾಲ್ಮೀಕಿ ಸರ್ಕಲ್) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸ TB ಕಾಯಿಲೆ ತ್ವರಿತ ಪತ್ತೆಯ ಕಫ ಪರೀಕ್ಷೆ ಯಂತ್ರ TRUE NAAT Machine ಅನ್ನು ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ರವರಿಂದ ಲೋಕಾರ್ಪಣೆ ಮಾಡಲಾಯಿತು.
ಕ್ಷಯರೋಗ(TB) ಪರೀಕ್ಷೆಯನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ನಿಖರವಾಗಿ ಪತ್ತೆಹಚ್ಚಲು ಹೊಸದಾಗಿ TRUE NAAT Machine ಒಂದು ಬಾರಿಗೆ ಎರಡು ಕಫಗಳನ್ನು ಪರೀಕ್ಷಿಸುತ್ತದೆ. ಇದರ ಫಲಿತಾಂಶ ತ್ವರಿತ ಮತ್ತು ನಿಖರವಾಗಿರುತ್ತದೆ. ಇದು ಸಂಪೂಣ೯ ಉಚಿತವಾಗಿದು, ಇದರಿಂದ ಕ್ಷಯರೋಗಿಗಳಿಗೆ ಅನುಕೂಲವಾಗುತ್ತದೆ. ಈ ಯಂತ್ರವು ಕ್ಷಯರೋಗದ ಔಷಧಿಗಳ ಪ್ರತಿಬಂದತೆ (Drugs Restation) ಮಾಡಬಹುದು. ನಗರದ ವಾಲ್ಮೀಕಿ ವೃತ್ತದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಸೌಲಭ್ಯ ದೊರೆಯುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಕಳೆದುಕೊಳ್ಳಬೇಕೆಂದು ಡಾ.ಎಲ್.ಆರ್.ಶಂಕರ್ ನಾಯ್ಕ ಅವರು ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಡಾ.ಜಂಬಯ್ಯ, ಡಾ.ಸತೀಶ್ ಚಂದ್ರ, ಡಾ.ಭಾಸ್ಕರ್, ಎಂಪಿ ದೊಡ್ಡಮನಿ, ಡಾ.ಬಸವರಾಜ್, ಡಾ.ಮಂಜುನಾಥ್, ಡಾ.ಮೌನೇಶ್, ಮೀರಾ, ಧರ್ಮನಗೌಡ ಹಾಗೂ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.







