ವಿಜಯನಗರ | ಎರಡು ವರ್ಷದ ಸಾಧನಾ ಸಮಾವೇಶದ ಹಿನ್ನಲೆಯಲ್ಲಿ ಬೈಕ್ ರ್‍ಯಾಲಿ

ವಿಜಯನಗರ :-ಹೊಸಪೇಟೆ : ರಾಜ್ಯ ಸರ್ಕಾರದ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಎರಡು ವರ್ಷದ ಸಾಧನಾ ಸಮಾವೇಶ ಹಿನ್ನಲೆಯಲ್ಲಿ ಹೊಸಪೇಟೆಯ ಯುವ ಕಾಂಗ್ರೆಸ್‌ನ ನೂರಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳ ಮುಖಾಂತರ ಜಿಲ್ಲಾ ಕ್ರೀಡಾಂಗಣದಲ್ಲಿರುವ ಮುಖ್ಯ ವೇದಿಕೆಗೆ ತಲುಪಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಬಿ.ಝೆಡ್.ಝಮೀರ್ ಅಹಮದ್ ಖಾನ್, ಶಾಸಕರಾದ ಗವಿಯಪ್ಪ, ಗಣೇಶ್, ಮಾಜಿ ಶಾಸಕ ಭೀಮಾ ನಾಯ್ಕ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಜಿಲ್ಲಾಧ್ಯಕ್ಷ ಅಶೋಕ್ ಬೈಕ್ ರ್‍ಯಾಲಿ ನಡೆಸಿದರು.
Next Story





