ವಿಜಯನಗರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ವಿಜಯನಗರ(ಹೊಸಪೇಟೆ) : ಹೊಸಪೇಟೆ ಬೈಪಾಸ್ ರಸ್ತೆಯ ಸುಂಕ್ಲಮ್ಮ ಗುಡಿ ಹತ್ತಿರವಿರುವ ಸ್ಟೀಲ್ ಬ್ರೀಡ್ಜ್ ಮೇಲೆ ಜೂ.4 ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ ಚಹರೆ ವಿವರ : 5.6 ಅಡಿ ಎತ್ತರ, ಸಾಧರಣ ಮೈಕಟ್ಟು, ಸಾಧಾ ಬಿಳುಪು ಮೈ ಬಣ್ಣ, ಗಡ್ಡ, ಮೀಸೆ ಬಿಟ್ಟಿರುತ್ತಾನೆ. ತಲೆಯಲ್ಲಿ ಸುಮಾರು 2 ಇಂಚು ಕಪ್ಪು ಕೂದಲುಗಳಿವೆ ಮತ್ತು ಹಣೆಯ ಮೇಲೆ ಹಳೆಗಾಯದ ಗುರುತು ಇರುತ್ತದೆ. ಮೃತನು ಬಿಳಿಯ ಬಣ್ಣದ ಆಫ್ ಬನಿಯನ್, ಅಂಡರವೇರ್ ಧರಿಸಿರುತ್ತಾನೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ವಿಜಯನಗರ ಕಂಟ್ರೋಲ್ ರೂಂ. 9480805700, 08394-224933. ಗ್ರಾಮೀಣ ಪೊಲೀಸ್ ಠಾಣೆ ನಂ.9480805746, 08394-228233. ಹೊಸಪೇಟೆ ಡಿಎಸ್ಪಿ ಕಚೇರಿ ನಂ.9480805720, 08394-224204 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story