ವಿಜಯನಗರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ವಿಜಯನಗರ(ಹೊಸಪೇಟೆ) :ಹೊಸಪೇಟೆ ರಾಯ ಕಾಲುವೆ ಹತ್ತಿರ ದಂಡೆಯ ಮೇಲೆ 35-40 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಜು.26 ಪತ್ತೆಯಾಗಿದ್ದು, ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ ಚಹರೆ ವಿವರ : 5.5 ಅಡಿ ಎತ್ತರ, ಸಾಧರಣ ಮೈಕಟ್ಟು, ದುಂಡು ಮುಖ, ಕುರುಚಲ ಗಡ್ಡ ಬಿಟ್ಟಿರುತ್ತಾನೆ. ಮೃತನ ಕಪ್ಪು ಬಣ್ಣದ ನೈಕ್ ಪ್ರೋ ಕಂಪನಿಯ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಸಿಕೆ ಹೆಸರಿರುವ ಪ್ಯಾಂಟ್ ಧರಸಿರುತ್ತಾನೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಪೇಟೆ ಕಂಟ್ರೋಲ್ ರೂಂ. 08394-226100, ಗ್ರಾಮೀಣ ಪೊಲೀಸ್ ಠಾಣೆ ಮೊ. 08394-224933, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮೊ. 9480805753 ಮತ್ತು ಗ್ರಾಮೀಣ ಪೊಲೀಸ್ ಠಾಣೆ ಪಿಐ ನಂ. 9480805746, ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





