ವಿಜಯನಗರ| ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ವಿಜಯನಗರ: ಕಮಲಾಪುರದ ಹೆಚ್ಪಿಸಿ ಬಳಿ ಇರುವ ಪೋರ್ವೇ ಕಾಲುವೆ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯು 40 ರಿಂದ 45ರ ಹರೆಯದವಾಗಿದ್ದು, 5.7 ಅಡಿ ಎತ್ತರವನ್ನು ಹೊಂದಿದ್ದಾರೆ. ದೃಢವಾದ ಮೈಕಟ್ಟು ಹೊಂದಿದ್ದು, ಎಡಗೈ ಮೇಲೆ ಶ್ರೀ ಮಂಜುನಾಥ ಎಂದು ಕನ್ನಡದಲ್ಲಿ ಹಚ್ಚೆ ಗುರುತು ಹಾಕಿಸಿಕೊಂಡಿದ್ದಾರೆ.
ಈ ಅನಾಮಧೇಯ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ್ ಸಂಖ್ಯೆ 9480805700, ಜಿಲ್ಲಾ ಎಸ್.ಪಿ ಮೊಬೈಲ್ ಸಂಖ್ಯೆ 948805701, ಹೆಚ್ಚುವರಿ ಎಸ್.ಪಿ ಮೊಬೈಲ್ ಸಂಖ್ಯೆ 9480805702, ಡಿಎಸ್ಪಿ ಮೊಬೈಲ್ ಸಂಖ್ಯೆ 9480805720 ಸಂಪರ್ಕಿಸಬೇಕಾಗಿ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





