ವಿಜಯನಗರ | ದಲ್ಲಾಳಿಗಳಿಂದ ರೈತರನ್ನು ರಕ್ಷಿಸಬೇಕಿದೆ : ಶಾಸಕ ಬಿ.ದೇವೇಂದ್ರಪ್ಪ

ಹರಪನಹಳ್ಳಿ : ಪ್ರಸಕ್ತ ಮುಂಗಾರಿನಲ್ಲಿ ಖಾಸಗಿ ಗೊಬ್ಬರ, ಬೀಜ ಮಾರಾಟಗಾರ ದಲ್ಲಾಳಿಗಳಿಂದ ಕೃತಕ ರಸಗೊಬ್ಬರ ಅಭಾವ ಉಂಟಾಗಿ ರೈತರಿಗೆ ಸಮಸ್ಯೆ ಉಂಟಾಗಿದೆ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಹೊಸಕೋಟೆ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತೆ ಅಭಿಯಾನ ಯೋಜನೆಯಡಿ ಪರಿಕರಗಳ ವಿತರಣಾ ಕಾರ್ಯಕ್ರಮ ಹಾಗೂ ಹಿಂಗಾರು ಬೆಳೆಯಲ್ಲಿ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಬಿ.ದೇವೇಂದ್ರಪ್ಪ ಮಾತನಾಡಿದರು.
ಉಪ ಕೃಷಿ ನಿರ್ದೇಶಕ ಡಾ.ನಯೀಮ್ ಪಾಷಾ ಮಾತನಾಡಿ, ಆಧುನಿಕತೆ ಬೆಳೆದಂತೆ ಕೃಷಿ ಪದ್ಧತಿಗಳು ಬದಲಾವಣೆಯಾಗುತ್ತಿದೆ. ಯೂರಿಯಾದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ, ಇಳುವರಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನ್ಯಾನೋ ಯೂರಿಯ ಬಳಕೆ ರೂಢಿಸಿಕೊಳ್ಳಬೇಕು. ಕೃಷಿ ಇಲಾಖೆಯಲ್ಲಿ ಅನೇಕ ರೈತಪರ ಯೋಜನೆಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ರೈತ ಮಹಿಳಾ ಸಂಘಟನೆಗಳಿಗೆ ಸಬ್ಸಿಡಿ ಯೋಜನೆಗಳಿವೆ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ್, ಉಪ ಕೃಷಿ ಸಹಾಯಕ ಅಧಿಕಾರಿ ಷಣ್ಮುಖ ನಾಯ್ಕ, ಮುಖಂಡ ಪ್ರಕಾಶ್ ಪಾಟೀಲ್, ಬೂದಿಹಾಳ್ ಸಿದ್ದಪ್ಪ, ಶೇಖರಪ್ಪ, ಡಾ.ಚಂದ್ರ ಕಾಂತ್, ಗುಡಿಹಳ್ಳಿ ಹಾಲೇಶ್, ಚನ್ನ ಬಸಪ್ಪ, ತುಂಬಿಗೆರೆ ಶಿವಣ್ಣ, ಗುಡಿಹಳ್ಳಿ ದುಗತ್ತಿ ವಿರೇಶ್, ರಾಜಪ್ಪ, ವಕೀಲ ನಂದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





