ವಿಜಯನಗರ | ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಸೂರ್ಯಕಾಂತಿ ಖರೀದಿ ಕೇಂದ್ರಗಳ ಪ್ರಾರಂಭ
ವಿಜಯನಗರ(ಹೊಸಪೇಟೆ), ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇಂಗಾ ಮತ್ತು ಸೂರ್ಯಕಾಂತಿ ಉತ್ಪನ್ನ ಖರೀದಿಸುವ ಸಂಬಂಧ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಕವಿತಾ.ಎಸ್.ಮನ್ನಿಕೇರಿ ತಿಳಿಸಿದ್ದಾರೆ.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾವನ್ನು ಪ್ರತಿ ಕ್ವಿಂಟಾಲ್‌ಗೆ 7,263 ರೂ. ಹಾಗೂ ಸೂರ್ಯಕಾಂತಿ 7,721 ರೂ. ಗಳಂತೆ ನಿಗಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ರೈತರಿಂದ ಖರೀದಿಗಾಗಿ ವಿಜಯನಗರ ಜಿಲ್ಲೆಯ ಎಣ್ಣೇ ಬೀಜ ಬೆಳೆಗಾರರ ಸಹಕಾರ ಸಂಘ ನಿಯಮಿತಗಳಲ್ಲಿ ಎಲ್ಲಾ ತಾಲೂಕಿನ ಖರೀದಿ ಕೇಂದ್ರಗಳ ತೆರೆಯಲಾಗಿದೆ. ರೈತರು ಖರೀದಿ ಕೇಂದ್ರಗಳಿಗೆ ಸಂಪರ್ಕಿಸಲು ಹೂವಿನಹಡಗಲಿಯ ಇಟಗಿ ಗ್ರಾಮದ ಚಂದ್ರಪ್ಪ ಮೊ.9902812417, ಹರಪನಹಳ್ಳಿಯ ನಂದಿಬೇವೂರು ಗ್ರಾಮ ಮೊ.9902128437, ಹಗರಿಬೊಮ್ಮನಹಳ್ಳಿಯ ಉಪನಾಯಕನಹಳ್ಳಿ ಗ್ರಾಮ ಕೃಷ್ಣಪ್ಪ ಮೊ.7899891663, ಕೂಡ್ಲಿಗಿ ಹುರುಳಿಹಾಳ ಗ್ರಾಮ ಅಜ್ಜಪ್ಪ ಮೊ.9880421083, ಕೊಟ್ಟೂರು ಕೋಗಳಿ ಗ್ರಾಮದ ಶಿವಣ್ಣ ಮೊ.9945073015 ಹಾಗೂ ಹೊಸಪೇಟೆ ಚಿತ್ತವಾಡ್ಗಿ ರಸ್ತೆ ಅಂಬೇಡ್ಕರ ಸರ್ಕಲ್ ಹತ್ತಿರ ಹುಲುಗಪ್ಪ ಮೊ.944847752 ಸೇರಿದಂತೆ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ ವಿಭಾಗೀಯ ಕಚೇರಿ ವಿಜಯನಗರ ಜಿಲ್ಲೆಯ ಅಧಿಕಾರಿ ಅಯ್ಯಪ್ಪ ಡಂಬಾಳ ಮೊ.8073797774 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







