ವಿಜಯನಗರ | ಶ್ರೀ ಹಗರಿ ಲಿಂಗೇಶ್ವರ ಸಮಿತಿ ವತಿಯಿಂದ ಹಗರಿ ಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ
ಶಿಲಾಮೂರ್ತಿ ಪ್ರತಿಷ್ಠಾಪನೆ, ಸಾಮೂಹಿಕ ವಿವಾಹ ಕಾರ್ಯಕ್ರಮ

ವಿಜಯನಗರ (ಹೊಸಪೇಟೆ) : ವಿಜಯನಗರ ಕ್ಷೇತ್ರದ ಹೊಸಪೇಟೆಯ ಕಾಕುಬಾಳು ಗ್ರಾಮದಲ್ಲಿ ಶ್ರೀ ಹಗರಿ ಲಿಂಗೇಶ್ವರ ಸಮಿತಿ ವತಿಯಿಂದ ಹಗರಿ ಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಅಂಜುಮನ್ ಕಮಿಟಿಯ ಅಧ್ಯಕ್ಷರು ಎಚ್.ಎನ್ ಮುಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿದರು.
ಈ ಸಂಧರ್ಭದಲ್ಲಿ ಷಡಕ್ಷರಿ ಸ್ವಾಮಿಗಳು, ಹಿರಿಯ ಮುಖಂಡರಾದ ಸಿದ್ದನಗೌಡ, ಮುಖಂಡರು, ಕಾಕುಬಾಳು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದ್ಯಸರು, ಊರಿನ ಗುರುಹಿರಿಯರು ಹಾಗೂ ಸಹಸ್ರಾರು ಗ್ರಾಮಸ್ಥರು ಉಪಸ್ಥಿತರಿದ್ದರು
Next Story





