ವಿಜಯನಗರ | ರೋಟರಿ ಕ್ಲಬ್‌ನಲ್ಲಿ ʼವೈ.ಉಮಾಮಹೇಶ್ವರ ರಾವ್ ರೋಟರಿ ಬ್ಲಡ್ ಸೆಂಟರ್ʼ ಉದ್ಘಾಟನೆ

ವಿಜಯನಗರ (ಹೊಸಪೇಟೆ) : ನಗರದ ರೋಟರಿ ಕ್ಲಬ್‌ನಲ್ಲಿ ವೈ.ಉಮಾಮಹೇಶ್ವರ ರಾವ್ ರೋಟರಿ ಬ್ಲಡ್ ಸೆಂಟರ್‌ನ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಸಂಸ್ಥೆಯ ಕಾರ್ಯವನ್ನು ಶಾಸಕ ಹೆಚ್.ಆರ್.ಗವಿಯಪ್ಪರವರು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಧು ಗೋಪಾಲಕೃಷ್ಣ, ಮುಖ್ಯ ಅತಿಥಿಗಳಾಗಿ ಡಾ.ಕೆ.ಎಸ್.ರಾಜಣ್ಣ, ಸಂಸದ ಇ.ತುಕಾರಾಂ, ಸಂಡೂರು ಶಾಸಕಿ ಈ.ಅನ್ನಪೂರ್ಣ, ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಂಕರ್ ನಾಯಕ್, ಬಿ.ಚಿನ್ನಪ್ಪ ರೆಡ್ಡಿ ಸೇರಿದಂತೆ ಹೊಸಪೇಟೆಯ ರೋಟೋರಿಯನ್ ಗಳು, ವಾಣಿಜ್ಯ ಉದ್ಯಮಿಗಳು ಸಮಾಜ ಸೇವಕರು, ಮುಖಂಡರುಗಳು ಉಪಸ್ಥಿತರಿದ್ದರು.
Next Story





