ವಿಜಯನಗರ | ಕೆರೆಗುಡಿಹಳ್ಳಿಯ ದಶಕಗಳ ಕನಸು ಈಡೇರಿಕೆ : ಕಂದಾಯ ಗ್ರಾಮಕ್ಕೆ 2-ಇ ಅಧಿಸೂಚನೆ ಹೊರಡಿಸಿದ ಸರ್ಕಾರ

ವಿಜಯನಗರ : ದಶಕಗಳ ಕಾಲ ಒಂದು ಜಮೀನಿಗೆ ಸೇರಿದ್ದ ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮ ಇದೀಗ ಕಂದಾಯ ಗ್ರಾಮವಾಗಿ ಸೇರಿಸುವಂತೆ ಸರ್ಕಾರ 2-ಇ ಅಧಿಸೂಚನೆ ಹೊರಡಿಸಿದೆ.
ಕೆರೆಗುಡಿಹಳ್ಳಿ ಗ್ರಾಮಸ್ಥರು ಸರ್ಕಾರದ 2-ಇ ಅಧಿಸೂಚನೆ ಆದೇಶ ಪತ್ರವನ್ನು ಅಧಿಕಾರಿಗಳಿಂದ ಸ್ವೀಕರಿಸಿದರು.
ಕೆರೆಗುಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆದೇಶದ ಕುರಿತು ಇಲ್ಲಿನ ಜನತೆಗೆ ತಿಳಿಸಿದ ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ್ ಅವರು ಮಾತನಾಡಿದರು.
ಎಐಟಿಯುಸಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಕೆರೆಗುಡಿಹಳ್ಳಿ ಮುಖಂಡರಾದ ಸಿ.ಶಿವಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡ ಅರಕೇರಿ ರಾಜಪ್ಪ, ಪಿ.ಎಸ್.ವಿರೇಶ್, ಅರಕೇರಿ ದುರುಗಪ್ಪ, ಉಚ್ಚಂಗಿದುರ್ಗದ ಪರಸಪ್ಪ, ಧರ್ಮಣ್ಣ, ಕೆ.ನಾಗರಾಜ್, ಮಹಿಳೆಯರು ಸೇರಿ ಕೆರೆಗುಡಿಹಳ್ಳಿ ಗ್ರಾಮಸ್ಥರು ಸರ್ಕಾರದ 2-ಇ ಅಧಿಸೂಚನೆ ಆದೇಶ ಪತ್ರ ಸ್ವೀಕರಿಸಿದರು.
Next Story





