ವಿಜಯನಗರ | ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ವಿಜಯನಗರ (ಹೊಸಪೇಟೆ) : ಹೊಸಪೇಟೆ ನಗರದ ಮಹಿಳಾ ಸಮಾಜ ಶಾಲೆಯ ಎದುರುಗಡೆ ಇರುವ ಕೋರ್ಟ್ ಪಕ್ಕದಲ್ಲಿ ಸುಮಾರು 35 ರಿಂದ 40 ವರ್ಷದ ಅನಾಮಧೇಯ ಶವ ಪತ್ತೆಯಾಗಿದ್ದು, ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಚಹರೆ : 5.6 ಅಡಿ ಎತ್ತರ, ತಲೆಯಲ್ಲಿ ಸುಮಾರು 2-3 ಇಂಚು ಉದ್ದದ ಕಪ್ಪು ಕೂದಲು ಮತ್ತು ಚಿಗರು ಗಡ್ಡ, ಮೀಸೆ ಬಿಟ್ಟಿರುತ್ತಾನೆ. ಕಪ್ಪು ಮೈಬಣ್ಣ, ಕೋಲು ಮುಖ, ಸಾಧರಣ ಮೈಕಟ್ಟು, ಕಪ್ಪು ಬಣ್ಣದ ನೀಳ ತಲೆಗೂದಲಿಂದ ಕೂಡಿದ್ದು ಎದೆಯ ಮೇಲೆ ಹಗಲವಾದ ಮಚ್ಚೆ ಹಾಗೂ ಬಲಗೈಯಲ್ಲಿ ಅಮ್ಮ ಎಂದು ಎಡಗೈಲ್ಲಿ ತಿಪ್ಪೇಶ್ ಭೂ ಎಂದು ಹಚ್ಚೆ ಇರುತ್ತದೆ. ಮೃತನ ಮೈ ಮೇಲೆ ಬಿಳಿ ಬಣ್ಣದ ಕಾಲರ್ ಉಳ್ಳ ತುಂಬು ತೋಳಿನ ನೀಲಿ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಒಳ ಉಡುಪು ಹಾಗೂ ಗ್ರೇ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಅನಾಮಧೇಯ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಹೊಸಪೇಟೆ ಪಿಐ ಪಟ್ಟಣ ಪೊಲೀಸ್ ಠಾಣೆ ದೂ.08394224033, 9480805745 ಡಿಎಸ್ಪಿ ದೂ.08394224204, 9480805720 ಎಸ್ಪಿ ಮೊ.9480805700 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





