ವಿಜಯನಗರ | ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ವಿಜಯನಗರ (ಹೊಸಪೇಟೆ : ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್ಪಿಸಿ ಪೋರ್ ಕಾಲುವೆಯಲ್ಲಿ ಸುಮಾರು 55 ರಿಂದ 60 ವರ್ಷದ ಅನಾಮಧೇಯ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಈ ಕುರಿತು ಕಮಲಾಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಚಹರೆ : 5.6 ಅಡಿ ಎತ್ತರ, ಬಲಗೈ ರಟ್ಟೆಯ ಮೇಲೆ ಹೂವುಗಳು ಅಚ್ಚೆ ಗುರುತು ಮತ್ತು ಎಡಗೈಯಲ್ಲಿ ಕಪ್ಪುದಾರ ಇರುತ್ತದೆ. ಮೃತನ ಮೈಮೇಲೆ ನಶಿಪುಡಿ ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಅನಾಮಧೇಯ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.9480805700, ಎಸ್ಪಿ ಮೊ.9480805701, ಹೆಚ್ಚುವರಿ ಎಸ್ಪಿ ಮೊ.9480805702, ಉಪವಿಭಾಗ ಡಿಎಸ್ಪಿ ಮೊ.9480805720, ಹಂಪಿ ವೃತ್ತ ಸಿಪಿಐ ಮೊ.9480805732 ಮತ್ತು ಕಮಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಮೊ.9480805762 ಸಂಖ್ಯೆಗಳಿಗೆ ಕರೆ ಮಾಡಿ ಸಂಪರ್ಕಿಸಬೇಕೆಂದು ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





