ವಿಜಯನಗರ | ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು

ವಿಜಯನಗರ(ಹೊಸಪೇಟೆ) : ಹರಪನಹಳ್ಳಿ ತಾಲೂಕಿನ ಲೋಲೇಶ್ವರ ಗ್ರಾಮದ ನಿವಾಸಿ ಕೊಟ್ರೇಶ ಗೌಡ (44) ವರ್ಷದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಚಹರೆ : 5.5 ಅಡಿ ಎತ್ತರ ಇದ್ದು. ಸಾಧಾರಣ ಮೈಕಟ್ಟು, ದುಂಡು ಮುಖ, ಕಪ್ಪು ಮೈ ಬಣ್ಣ, ಕಪ್ಪು ಕೂದಲು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬ ತೋಳಿನ ಅಂಗಿ ಮತ್ತು ಬಿಳಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಚಿಗಟೇರಿ ಪೊಲೀಸ್ ಠಾಣೆ ಮೊ.9480805779, ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಹರಪನಹಳ್ಳಿ ವೃತ್ತ ಮೊ. 9480805736, ಹರಪನಹಳ್ಳಿ ಉಪ ವಿಭಾಗ ಡಿಎಸ್‌ಪಿ ದೂ.08398-280237 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಚಿಗಟೇರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





