ವಿಜಯನಗರ | ಮೇ 13 ರಂದು ಕಮಲಾಪುರ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ

ವಿಜಯನಗರ(ಹೊಸಪೇಟೆ) : ಕಮಲಾಪುರ 110/11 ಕೆವಿ ಕಮಲಾಪುರ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 13 ರಂದು ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕಮಲಾಪುರ ಶಾಖಾ ವ್ಯಾಪ್ತಿಗೆ ಬರುವ ಕಮಲಾಪುರ ಪಟ್ಟಣ ಪಂಚಾಯಿತಿ, ಬುಕ್ಕಸಾಗರ ಗ್ರಾಪಂ, ಸೀತರಾಮ ತಾಂಡ ಗ್ರಾಪಂ, ಮಲಪನಗುಡಿ ಗ್ರಾಪಂ, ಹಂಪಿ ಗ್ರಾಪಂ, ಪಾಪಿನಾಯಕನಹಳ್ಳಿ ಗ್ರಾಪಂ, ಗಾದಿಗನೂರು ಗ್ರಾಪಂ ಮತ್ತು ಬೈಲುವದ್ದಿಗೇರಿ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್ ಸೆಟ್ ರೈತರಿಗೆ ವಿದ್ಯುತ್ ಆಡಚಣೆ ಆಗಲಿದೆ.
ರೈತರು, ಗ್ರಾಹಕರು ಸಹಕರಿಸಬೇಕೆಂದು ಹೊಸಪೇಟೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





