ವಿಜಯನಗರ | ರಮಝಾನ್-ಯುಗಾದಿ ಹಬ್ಬ : ಪೊಲೀಸರಿಂದ ಶಾಂತಿ ಸಭೆ

ವಿಜಯನಗರ / ಹೊಸಪೇಟೆ: ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ರಮಝಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಸರ್ವಧರ್ಮದ ಮುಖಂಡರೊಂದಿಗೆ ಪೊಲೀಸ್ ಠಾಣಾಧಿಕಾರಿ ಹುಲುಗಪ್ಪ ರವರ ನೇತೃತ್ವದಲ್ಲಿ ಶಾಂತಿ ಸಭೆ ಆಯೋಜಿಸಲಾಯಿತು.
ಶಾಂತಿ ಸಭೆಯಲ್ಲಿ ಪೊಲೀಸ್ ಠಾಣಾಧಿಕಾರಿಗಳು ಹಬ್ಬಗಳನ್ನು ಶಾಂತಿಯುತವಾಗಿ ಮತ್ತು ವಿಜೃಂಭಣೆಯಿಂದ ಆಚರಿಸುವಂತೆ ಸೂಚಿಸಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಾಗೃತಿ ವಹಿಸಲು ಮತ್ತು ಹಬ್ಬವನ್ನು ಶಾಂತಿಪೂರಿತವಾಗಿ ಆಚರಿಸಲು ಎಲ್ಲಾ ಮುಖಂಡರಿಗೆ ವಿನಂತಿಸಲಾಯಿತು.
ತೊಂದರೆ ಉಂಟುಮಾಡಬಹುದಾದ ಲೌಡ್ ಸ್ಪೀಕರ್‌ಗಳು ಅಥವಾ ಪ್ರಚೋದನಕಾರಿ ಬ್ಯಾನರ್‌ಗಳನ್ನು ಅಳವಡಿಸಬಾರದು ಎಂದು ಸೂಚನೆ ನೀಡಲಾಯಿತು. ಘಟನೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದಲ್ಲಿ ತಕ್ಷಣ 112 ಗೆ ಕರೆಮಾಡಿ ಅಥವಾ ಸ್ಥಳೀಯ ಪೊಲೀಸರನ್ನು ಸಂಪರ್ಕಿಸುವಂತೆ ಸಹ ಶಾಂತಿ ಸಭೆಯಲ್ಲಿ ಸೂಚಿಸಲಾಯಿತು.
Next Story





