ವಿಜಯನಗರ | ಜು.3 ರಿಂದ 5ರವರೆಗೆ ಸ್ಕೌಟ್ಸ್, ಗೈಡ್ಸ್ ಪರೀಕ್ಷಾ ಶಿಬಿರ ಆರಂಭ : ಪಿ.ಮಂಜುನಾಥಪ್ಪ

ವಿಜಯನಗರ(ಹೊಸಪೇಟೆ) : ಸ್ಕೌಟ್ಸ್ ಮತ್ತು ಗೈಡ್ಸ್ ಗಳ ವಿಶೇಷ ಪರೀಕ್ಷೆಗಳಾದ ತೃತೀಯ ಸೋಪಾನ, ತೃತೀಯ ಚರಣ್, ಸುವರ್ಣ ಪಂಖ್ ಹಾಗೂ ನಿಪುಣ ಪರೀಕ್ಷಾ ಶಿಬಿರಗಳು ಜು.3 ರಿಂದ 5 ರವರೆಗೆ ನಡೆಸಲಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪಿ.ಮಂಜುನಾಥಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಯೋಜನಾ ಸಮಿತಿ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿ ಅವರು, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ನಡೆಯುವ ಪರೀಕ್ಷಾ ಶಿಬಿರಗಳಿಗೆ ಎಲ್ಲಾ ಸ್ಕೌಟರ್ ಮತ್ತು ಗೈಡರ್‌ಗಳು ಸಕ್ರಿಯವಾಗಿ ಭಾಗವಹಿಸಬೇಕು. ಈಗಾಗಲೇ ಬ್ಯಾಡ್ಜ್ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ನಡೆಯುವ ಪರೀಕ್ಷೆಗಳಿಗೆ ಮಕ್ಕಳು ಪರಿಪೂರ್ಣ ಜ್ಞಾನ ಹೊಂದಲು ಪ್ರಾವಿಣ್ಯತಾ ಪದಕದ ಪ್ರಮಾಣ ಪತ್ರ ಜೊತೆಗೆ ಜಿಲ್ಲಾ ಪದಕಗಳನ್ನು ಆಯಾ ಸಮಿತಿ ನೇಮಕ ಮಾಡಿರುವ ಪರೀಕ್ಷಕರಿಂದ ಪಡೆದುಕೊಳ್ಳಲು ಉತ್ತೇಜನ ನೀಡಬೇಕಿದೆ ಎಂದರು.
ಸಭೆಯಲ್ಲಿ ಯೋಜನಾ ಸಮಿತಿ ಸದಸ್ಯರಗಳಾದ ಮಂಗಳಗೌರಿ, ಜಿ.ಎಂ.ರಾಜಶೇಖರ್, ಶೆರಿನಾ, ಗೀತಾಂಜಲಿ ಗೌಡ, ಶ್ರೀನಿವಾಸ್.ಜಿ.ಜೋಷಿ, ನಾಗಭೂಷಣ್ ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳಾದ ತಿಂದಪ್ಪ, ಮಾದೇಶ, ಎಲ್.ಮೂರ್ತಿ, ಬನ್ನಿಗೌಡ, ತಿಪ್ಪೇಸ್ವಾಮಿ, ದಳನಾಯಕರಾದ ಕುಮಾರಸ್ವಾಮಿ, ಜಿಲ್ಲಾ ಸಂಘಟಕರಾದ ಜಿ.ಬಿ.ಸಿ ಪಾಟೀಲ್ ಇತರರಿದ್ದರು.