ವಿಜಯನಗರ | ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ವಿಜಯನಗರ (ಹೊಸಪೇಟೆ) : ನಗರದ ಅಂಜುಮನ್ ಶಾದಿಮಹಲ್ ಆವರಣದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಹೊಸಪೇಟೆ ವತಿಯಿಂದ 2024-25 ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರು ಹಾಗು ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಹೆಚ್.ಎನ್.ಮುಹಮ್ಮದ್ ಇಮಾಮ್ ನಿಯಾಜಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಅಂಕಗಳೇ ಅಂತಿಮ ಅಲ್ಲ, ಅಂಕಗಳು ಹಾಗು ಪುರಸ್ಕಾರಗಳ ಜೊತೆಗೆ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಸಬೇಕು ಎಂದರು.
ಈ ಸಂಧರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಉಪಾಧ್ಯಕ್ಷರಾದ ಫೈರೋಜ್ ಖಾನ್. ಖಜಾಂಚಿಗಳಾದ ಅನ್ಸರ್ ಬಾಷ, ಜಂಟಿ ಕಾರ್ಯದರ್ಶಿಗಳಾದ ಡಾ.ದುರ್ವೇಶ್ ಮುಯೂದ್ದೀನ್, ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಸದ್ಯಸ ಎಮ್.ಡಿ.ಸಿರಾಜ್ ಸಾಬ್, ಹೆಚ್.ಎನ್.ಎಫ್ ಅಲಿ ಬಾಬು ನಿಯಾಜಿ, ಅಬ್ದುಲ್ ಖಾದರ್ ರಫಾಯಿ, ಮಾಜಿ ನಗರಸಭಾ ಸದಸ್ಯರುಗಳಾದ ಅಬ್ದುಲ್ ಖದೀರ್ ಸಾಬ್, ಶೆಕ್ಷಾವಲಿ, ಕೆ.ಎಂ.ಕೆ.ರಿಯಾಜ್, ಫೈರೋಜ್ ಪೀರಾ, ಟಿಂಕರ್ ರಫೀಕ್, ಅಜೀಮ್ ಬೇಗ್, ಆರೀಫಾ ಮೇಡಮ್, ಮುಸ್ತಾಫಾ ಮೆಹಮೂದ್, ಹಾಗು ಸಮಾಜದ ಹಿರಿಯ ಮುಖಂಡರು ಹಾಗೂ ಪಾಲಕರು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದರು.







