ವಿಜಯನಗರ | ಚೆಕ್ ಡ್ಯಾಂನಲ್ಲಿ ಈಜಲು ಹೋದ ಬಾಲಕರಿಬ್ಬರು ಮೃತ್ಯು

ಹನುಮಂತ, ಅರವಿಂದ
ವಿಜಯನಗರ : ಚೆಕ್ ಡ್ಯಾಂನಲ್ಲಿ ಈಜಲು ಹೋದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದ ಕರಿಗನೂರು ಗ್ರಾಮದ ಹೊರವಲಯದ ಗುಡ್ಡದ ತಿಮ್ಮಪ್ಪನ ದೇಗುಲದ ಬಳಿ ನಡೆದಿದೆ.
ಮೃತರನ್ನು ಕಾರಿಗನೂರು ಆರ್ಬಿಎಸ್ಎಸ್ಎನ್ ಕ್ಯಾಂಪ್ ನಿವಾಸಿಗಳಾದ ಹನುಮಂತ (14) ಅರವಿಂದ (14) ಎಂದು ಗುರುತಿಸಲಾಗಿದೆ.
ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





