ವಿಜಯನಗರ | ವಾರ್ತಾಭಾರತಿ ವರದಿ ಫಲಶ್ರುತಿ : ಗ್ರಾಮಸ್ಥರಿಗೆ ಕಾಟ ನೀಡುತ್ತಿದ್ದ ಕೋತಿ ಸೆರೆ

ಹರಪನಹಳ್ಳಿ: ತಾಲೂಕಿನ ಯರಬಾಳು ಗ್ರಾಮದಲ್ಲಿ ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಕೋತಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
“ಕೋತಿ ದಾಳಿಗೆ 12ಕ್ಕೂ ಹೆಚ್ಚು ಮಂದಿ ಗಾಯ” ಎಂಬ ಶೀರ್ಷಿಕೆಯಡಿ ವಾರ್ತಾಭಾರತಿ ಪತ್ರಿಕೆಯಲ್ಲಿ ಎ.1ರಂದು ವರದಿ ಪ್ರಕಟಿಸಿತ್ತು. ಈ ವರದಿಯ ಪರಿಣಾಮವಾಗಿ ಎಚ್ಚೆತ್ತ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಯರಬಾಳು ಗ್ರಾಮದಲ್ಲಿ ಭಾನುವಾರ ಗಂಗಾವತಿಯ ಕೋತಿ ಸೆರೆ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ, ಕೋತಿಯನ್ನು ಸೆರೆ ಹಿಡಿದು ಬೋನಿಗೆ ಹಾಕಿದ್ದಾರೆ.
ಗ್ರಾಮದಲ್ಲಿ ಕೋತಿಯ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಂಗಾವತಿ ಮೂಲದ ಅಭಿ ಅವರ ತಂಡ ಸ್ಥಳಕ್ಕೆ ಬಂದು ಕೋತಿಯನ್ನು ಸೆರೆ ಹಿಡಿದಿದೆ ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಪಿಡಿಓ ರೇವಣಸಿದ್ಧಪ್ಪ ತಿಳಿಸಿದ್ದಾರೆ.
Next Story






