Vijayanagara | ಕರಿಬಸವೇಶ್ವರಸ್ವಾಮಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಕೊಟ್ಟೂರು (ವಿಜಯನಗರ): ಪಟ್ಟಣದ ಕರಿಬಸವೇಶ್ವರಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿ ಮಹಮ್ಮದ್ ಶಾರುಖ್ ಅವರು ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಅವರ ವೇಷಭೂಷಣ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಕೊಟ್ಟೂರೇಶ್ವರರು, ಸಹ ಶಿಕ್ಷಕರಾದ ಎಂ.ಮಧುಮತಿ, ಜ್ಞಾನೇಶ್ವರಿ, ಎಂ.ಕರಿಬಸಮ್ಮ, ಪಿ. ರಹಿಮಾನ್ ಸಾಹೇಬ್, ಎಲ್. ಪಾಲಯ್ಯ ನಾಯಕ, ಬಿ.ಎಂ.ಭಾರತಿ, ಜಿ.ಟಿ.ಕವಿತ ಹಾಗೂ ಎಲ್‌ಕೆಜಿ ಶಿಕ್ಷಕಿ ಭಾರತಿ ಉಪಸ್ಥಿತರಿದ್ದರು.
ಪೋಷಕರು, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Next Story




