Vijayanagara | ಎಲ್.ಸಂಗೀತ ಅವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಹರಪನಹಳ್ಳಿ: ತಾಲೂಕಿನ ತೆಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಸಹ ಶಿಕ್ಷಕಿ ಎಲ್.ಸಂಗೀತ ಅವರಿಗೆ ವಿಜಯನಗರ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್. ಸಂಗೀತ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಹರಪನಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ಶಿಕ್ಷಕಿ ಸಂಗೀತ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಪದ್ಮಲತಾ, ಹರಪನಹಳ್ಳಿ ತಾಲೂಕು ಘಟಕದ ಅಧ್ಯಕ್ಷ ಎಂ. ಪ್ರಭು, ಪ್ರಧಾನ ಕಾರ್ಯದರ್ಶಿ ಎಂ. ರಮೇಶ್, ಗೌರವಾಧ್ಯಕ್ಷ ಕಾಟಿ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್. ಜೈನ್, ಜಿಲ್ಲಾ ಸಹ ಕಾರ್ಯದರ್ಶಿ ಬಿ. ರಾಜಶೇಖರ, ಜಿಲ್ಲಾ ಉಪಾಧ್ಯಕ್ಷ ಬಿ. ಕೊಟ್ರೇಶಪ್ಪ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್. ರಾಮಪ್ಪ, ಎನ್‌ಪಿಎಸ್ ಅಧ್ಯಕ್ಷ ಪಿ. ಅಂಜಿನಪ್ಪ, ಕಾರ್ಯದರ್ಶಿ ಸೊಪ್ಪಿನ ಹನುಮಂತಪ್ಪ, ಶಿಕ್ಷಕರ ಸಂಘದ ನಿರ್ದೇಶಕರಾದ ಸಾರಥಿ ಹನುಮಂತಪ್ಪ, ಎಸ್. ಶಿವಯೋಗಿ, ಕೆ. ಹರೀಶ, ಮನ್ಸೂರ್ ಅಹ್ಮದ್, ಚಂದ್ರಮೌಳಿ, ಬಂಡಿ ಬಸವರಾಜ್, ಕೃಷ್ಣ ನಾಯ್ಕ್, ಶಾಂತಮ್ಮ, ಬಂದಮ್ಮ, ಲಕ್ಷ್ಮಿದೇವಿ, ವಿಜಯಲಕ್ಷ್ಮಿ, ಕುಸುಮ, ವಿಶಾಲಾಕ್ಷಿ, ರೂಪ, ಅರುಣ, ಕರಿಬಸಪ್ಪ, ಚನ್ನಬಸಪ್ಪ, ಮಲ್ಲೇಶಪ್ಪ ಸೇರಿದಂತೆ ಪ್ರಗತಿಪರ ಶಿಕ್ಷಕರ ವೇದಿಕೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.






