ವಿಜಯನಗರ | ಗಲಾಟೆ ಬಿಡಿಸಲು ಹೋದ ವ್ಯಕ್ತಿಯ ಕೊಲೆ : 7 ಮಂದಿ ಆರೋಪಿಗಳ ಬಂಧನ

ಮಾಬುಸಾಬ್
ವಿಜಯನಗರ: ಹಳೇ ದ್ವೇಷ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಗಲಾಟೆ ಬಿಡಿಸಲು ಹೋದ ವ್ಯಕ್ತಿಯೊರ್ವ ಕೊಲೆಯಾದ ಘಟನೆ ಕಾರಿಗನೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಾಬುಸಾಬ್ ( 50) ಎಂದು ಗುರುತಿಸಲಾಗಿದೆ.
ಆರೋಪಿಗಳಾದ ಭಂಗಿ ಹನುಮಂತ, ಚರಣ, ಹುಲಿಗೆಮ್ಮ, ರಾಘವೇಂದ್ರ, ಚಂದ್ರಶೇಖರ, ಗುರುರಾಯ, ದರ್ಶನ್ ನನ್ನು ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ತಿಳಿಸಿದ್ದಾರೆ.
ಡಿ.18 ರಂದು ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮಾಬುಸಾಬ್ ಮನೆಯ ಮುಂದೆ ಹಳೇ ದ್ವೇಷ ಕಾರಣಕ್ಕೆ ನಡೆದ ಗಲಾಟೆಯನ್ನು ಬಿಡಿಸಲು ಹೋದ ನನ್ನ ತಂದೆಯನ್ನು 7 ಮಂದಿ ಹಲ್ಲೆ ನಡೆಸಿಕೊಲೆ ಮಾಡಿದ್ದಾರೆ ಎಂದು ಮೃತ ಮಾಬುಸಾಬ್ ಅವರ ಮಗ ಪಿ.ಜಿಲಾನ್ ಎಂಬುವವರು ಹೋಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





