ವಿಜಯನಗರ | ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ‘ಮನುಸ್ಮೃತಿ ದಹನ ದಿನ’ ಆಚರಣೆ

ವಿಜಯನಗರ : ಹೊಸಪೇಟೆ ನಗರದ ಜೈ ಭೀಮ್ ವೃತ್ತದಲ್ಲಿ ಗುರುವಾರದಂದು ಸಂವಿಧಾನ ಸಂರಕ್ಷಣಾ ಸಮಿತಿಯ ವತಿಯಿಂದ "ಮನುಸ್ಮೃತಿ ದಹನ ದಿನ"ವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡರು, "ಮನುಸ್ಮೃತಿಯು ಸಮಾಜದಲ್ಲಿ ಜಾತಿ ಪದ್ಧತಿ ಮತ್ತು ಸ್ತ್ರೀ ವಿರೋಧಿ ಧೋರಣೆಗಳನ್ನು ಪ್ರತಿಪಾದಿಸುತ್ತದೆ. ಇಂತಹ ಅಸಮಾನತೆಯ ಗ್ರಂಥವನ್ನು ಸುಡುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಮಾನತೆಯ ದಾರಿಯನ್ನು ತೋರಿಸಿಕೊಟ್ಟರು," ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಹಲವು ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಈ ವೇಳೆ ಸಂಚಾಲಕರಾದ ಸೋಮಶೇಖರ್ ಬಣ್ಣದಮನೆ, ಮರಡಿ ಜಂಬಯ್ಯ ನಾಯಕ, ಶಿವುಕುಮಾರ್, ತಾಯಪ್ಪ ನಾಯಕ, ರಾಮಚಂದ್ರ ಬಾಬು, ನಗರ ಸಭಾ ಸದಸ್ಯರಾದ ಖದೀರ್, ಗುಜರಿ ಮುಹಮ್ಮದ್, ಜೆ.ಸಿ.ಈರಣ್ಣ, ರಮೇಶ್, ವೆಂಕಟರಮಣ, ಬಿಸಾಟಿ ಮಹೇಶ್, ರವಿ ಕುಮಾರ್, ಸಜ್ಜಾದ್ ಖಾನ್, ಪ್ರಮೋದ್ ಪುಣ್ಯಮೂರ್ತಿ, ಇಂತಿಯಾಝ್, ಗಿರೀಶ್, ಹೊಬಳೇಶ್, ಯಲಪ್ಪ, ಜಬಯ್ಯ ಇನ್ನು ಅನೇಕರು ಪಾಲ್ಗೊಂಡಿದ್ದರು.







