ದೋಷಪೂರಿತ ನಂಬರ್ ಪ್ಲೇಟ್ ವಾಹನಗಳ ವಿರುದ್ಧ ವಿಜಯನಗರ ಪೊಲೀಸರ ವಿಶೇಷ ಕಾರ್ಯಾಚರಣೆ : 288 ಪ್ರಕರಣಗಳು ದಾಖಲು

ವಿಜಯನಗರ: ದೋಷಪೂರಿತ ಹಾಗೂ ನಿಯಮಬಾಹಿರ ನಂಬರ್ ಪ್ಲೇಟ್ ಅಳವಡಿಸಿಕೊಂಡ ವಾಹನಗಳ ವಿರುದ್ಧ ವಿಜಯನಗರ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಹನ ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಐಎಂವಿ (IMV) ಕಾಯ್ದೆ ಅನ್ವಯ ದೋಷಪೂರಿತ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿದ್ದ ವಾಹನಗಳ ವಿರುದ್ಧ ಕ್ರಮ ಕೈಗೊಂಡು ಒಟ್ಟು 288 ಪ್ರಕರಣಗಳನ್ನು ದಾಖಲಿಸಲಾಗಿದೆ.
ಉಪವಿಭಾಗವಾರು ದಾಖಲಾಗಿರುವ ಪ್ರಕರಣಗಳು :
• ಹೊಸಪೇಟೆ ಉಪವಿಭಾಗ: 65 ಪ್ರಕರಣಗಳು
• ಕೂಡ್ಲಿಗಿ ಉಪವಿಭಾಗ: 73 ಪ್ರಕರಣಗಳು
• ಹರಪನಹಳ್ಳಿ ಉಪವಿಭಾಗ: 150 ಪ್ರಕರಣಗಳು
ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದು, ವಾಹನ ಚಾಲನೆ ಮಾಡುವಾಗ ಡ್ರೈವಿಂಗ್ ಲೈಸೆನ್ಸ್ (DL), ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (RC), ಇನ್ಶುರೆನ್ಸ್ ಹಾಗೂ ಮಾಲಿನ್ಯ ಪ್ರಮಾಣಪತ್ರ (PUC) ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದೆ.
ವಾಹನಗಳಲ್ಲಿ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.







