ಸಿಜೆಐ ಮೇಲೆ ಶೂ ಎಸೆದ ಪ್ರಕರಣ | ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್‌ಗೆ ಮಾಡಿರುವ ಅಪಮಾನ : ಪ್ರೊ.ರಾಜು ಆಲಗೂರ

ವಿಜಯಪುರ, ಅ.16: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಗವಾಯಿ ಮೇಲೆ ಶೂ ದಾಳಿ ನಡೆಸಿರುವುದು ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ. ಕೂಡಲೇ ದಾಳಿ ನಡೆಸಿರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆಗ್ರಹಿಸಿದ್ದಾರೆ.
ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ದಲಿತ, ಪ್ರಗತಿಪರ, ಅಲ್ಪಸಂಖ್ಯಾತ ಸಂಘಟನೆಗಳು ಪ್ರತಿಭಟನೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ದಾಳಿ ಘಟನೆಯನ್ನು ಅನೇಕ ಪ್ರಗತಿಪರ ಚಿಂತಕರು ಕಟುವಾಗಿ ಖಂಡಿಸಿಲ್ಲ. ಇದು ನಮ್ಮ ದುರ್ದೈವ. ಪ್ರಧಾನಿ ನರೇಂದ್ರ ಮೋದಿ ಸಹ ಕಾಟಾಚಾರಕ್ಕೆ ಘಟನೆಯನ್ನು ಖಂಡಿಸಿ ಆರೋಪಿಯ ಬಂಧನಕ್ಕೆ ಸಂಬಂಧಿಸಿದಂತೆ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಅಹಿಂದ ಮುಖಂಡ ಸೋಮನಾಥ ಕಳ್ಳಮನಿ ಮಾತನಾಡಿದರು. ಭೌದ್ಧ ಧರ್ಮ ಗುರು ಶ್ರೀ ಡಾ.ಶಾಕು ಬೋಧಿಧಮ್ಮ ಉಪಸ್ಥಿತರಿದ್ದರು.
ಹಝ್ರತ್ ಸೈಯದ್ ಜೈನುಲಾಬುದ್ದೀನ್ ಹಾಶ್ಮೀ, ಅಹಿಂದ ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ರೈತ ಮುಖಂಡ ಅರವಿಂದ ಕುಲಕರ್ಣಿ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ರಮೇಶ ಆಸಂಗಿ, ಇರ್ಫಾನ್ ಶೇಖ್, ಅಡಿವೆಪ್ಪ ಸಾಲಗಲ್ಲ ಡಾ.ಜೆ.ಎಸ್.ಪಾಟೀಲ, ಎಂ.ಸಿ.ಮುಲ್ಲಾ, ವಿಡಿಎ ಮಾಜಿ ಅಧ್ಯಕ್ಷ ಆಝಾದ ಪಟೇಲ್, ದಿನೇಶ ಹಳ್ಳಿ, ಆರತಿ ಶಹಪೂರ, ಡಾ.ಗಂಗಾಧರ ಸಂಬಣ್ಣಿ, ಸಿದ್ಧು ರಾಯಣ್ಣವರ, ಪೀರಾ ಜಮಖಂಡಿ, ಫಯಾಜ್ ಕಲಾದಗಿ, ಜಿತೇಂದ್ರ ಕಾಂಬಳೆ, ಅಡಿವೆಪ್ಪ ಸಾಲಗಲ್ಲ, ಸುರೇಶ ಘೊಣಸಗಿ, ಸಂತೋಷ ಶಹಾಪೂರ, ಅಶ್ಫಾಕ್ ಮನಗೂಳಿ, ಡಾ.ರವಿಕುಮಾರ ಬಿರಾದಾರ, ಜೆ.ಎಸ್. ಪಾಟೀಲ ಮುಂತಾದವರು ಇದ್ದರು. ನ್ಯಾಯವಾದಿ ಶ್ರೀನಾಥ ಪೂಜಾರಿ, ಸುರೇಶ ಬಿಜಾಪೂರ ಕಾರ್ಯಕ್ರಮ ನಿರೂಪಿಸಿದರು.







