ಸಿಂದಗಿ : ಟ್ರ್ಯಾಕ್ಟರ್- ಬೈಕ್ ಢಿಕ್ಕಿ; ಸವಾರ ಮೃತ್ಯು

ವಿಜಯಪುರ: ಕಬ್ಬಿನ ಟ್ರ್ಯಾಕ್ಟರ್- ಬೈಕ್ ಮಧ್ಯೆ ಢಿಕ್ಕಿ ಉಂಟಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವಂದಾಲ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಶಿಕ್ಷಣ ಇಲಾಖೆಯ ಸಿಆರ್‌ಪಿ ವೀರೇಶ ಮಡಿವಾಳಪ್ಪ ಚೌಧರಿ (39) ಮೃತ ವ್ಯಕ್ತಿ. ಯಲಗೋಡದಲ್ಲಿ ನಡೆಯುವ ಕಲಿಕಾ ಹಬ್ಬದ ಪೂರ್ವಸಿದ್ಧತೆ ಮುಗಿಸಿಕೊಂಡು ಸಿಂದಗಿಗೆ ಆಗಮಿಸುವಾಗ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.
ಮೃತ ಮಡಿವಾಳಪ್ಪ ಅವರ ಪತ್ನಿಯು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಬ್ಬರು ಪುತ್ರರು ಇದ್ದಾರೆ.
Next Story





