ವಿಜಯನಗರ | ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಜಯನಗರ (ಹೊಸಪೇಟೆ) : ನಗರದ ಅಂಜುಮನ್ ಶಾದಿಮಹಲ್ ಆವರಣದಲ್ಲಿ ಅಂಜುಮನ್ ಖಿದ್ಮತೆ ಇ ಇಸ್ಲಾಂ ಕಮಿಟಿ, ಸಪ್ತಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಸಂಶೋಧನಾ ಕೇಂದ್ರ ಹಾಗು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮೂತ್ರಪಿಂಡ, ಕಲ್ಲು ಹೃದಯರೋಗ, ನರರೋಗ, ಕ್ಯಾನ್ಸರ್ ಹಾಗು ಇನ್ನಿತರ ಹಲವಾರು ಕಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಉಚಿತ ತಪಾಸಣಾ ಶಿಬಿರದಲ್ಲಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಹೆಚ್. ಎನ್. ಮುಹಮ್ಮದ್ ಇಮಾಮ್ ನಿಯಾಝ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಎಮ್. ಫೈರೋಜ್ ಖಾನ್, ಅನ್ಸರ್ ಭಾಷ, ಡಾ.ದುರ್ವೇಶ್ ಮುಯೂದ್ದೀನ್, ಸದ್ಯಸರಾದ ಅಬ್ದುಲ್ ಖಾದರ್ ರಫಾಯಿ, ಡಾ.ಶುಭೋದಯ, ಶ್ರಿಯಾ ಗೊಲ್ಲಮೊವಿ, ಡಾ.ಮುಹಮ್ಮದ್ ಜುನೆದ್, ಡಾ.ಪ್ರತೀಕ್ ಹಾಗು ಅಂಜುಮನ್ ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಹಿರಿಯ ನಾಗರೀಕರು ಯುವಕರು ಮಹಿಳೆಯರು ಭಾಗವಹಿಸಿದ್ದರು.





