Vijayapura | ಕಬ್ಬಿನ ಹೊಲಕ್ಕೆ ಆಕಸ್ಮಿಕ ಬೆಂಕಿ; ಆರಿಸಲು ಹೋದ ರೈತ ಸಜೀವ ದಹನ

ವಿಜಯಪುರ : ಕಬ್ಬಿನ ಹೊಲಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದನ್ನು ಆರಿಸಲು ಹೋಗಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ಸಿಂದಗಿ ತಾಲೂಕಿನ ಬನಹಟ್ಟಿ ಪಿ.ಎ ಗ್ರಾಮದಲ್ಲಿ ನಡೆದಿದೆ.
ಮಲ್ಲನಗೌಡ ಸೋಮನಗೌಡ ಬಿರಾದಾರ (67) ಮೃತ ರೈತ ಎಂದು ತಿಳಿದು ಬಂದಿದೆ.
ಬನಹಟ್ಟಿ ಪಿ.ಎ ಗ್ರಾಮದ 4 ಎಕರೆ ಕಬ್ಬಿಗೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ತೋಟದಲ್ಲಿ ಒಬ್ಬನೇ ಇದ್ದಿದ್ದರಿಂದ ಬೆಂಕಿ ನಂದಿಸುವ ಅವಸರದಲ್ಲಿ ಬೆಂಕಿ ಹತ್ತಿಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ದೇವರ ಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story





