ವಿಜಯಪುರ: ಎರಡು ತಾಲೂಕು ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲು

ಸಾಂದರ್ಭಿಕ ಚಿತ್ರ (PTI)
ವಿಜಯಪುರ: ಜಿಲ್ಲೆಯ ಎರಡು ತಾಲೂಕುಗಳಲ್ಲಿ ಕಳೆದ ರಾತ್ರಿ ಭೂಮಿ ಕಂಪಿಸಿದ ಅನುಭವ ಆಗಿರುವುದು ವರದಿಯಾಗಿದೆ.
ವಿಜಯಪುರ ತಾಲೂಕು ಹಾಗೂ ತಿಕೋಟಾ ತಾಲೂಕಿನ ವಿವಿಧ ಗ್ರಾಮದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6ನಷ್ಟು ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಟನೆ ತಿಳಿಸಿದೆ.
ಶುಕ್ರವಾರ ರಾತ್ರಿ 10:01ಕ್ಕೆ ವಿಜಯಪು ತಾಲೂಕಿನ ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳು ಸೇರಿದಂತೆ ತಿಕೋಟ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ.
ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ. ಸುತ್ತ ಮುತ್ತ ಭೂಕಂಪನದ ಅನುಭವ ಆಗಿದ್ದು, ಜನ ಆತಂಕಕ್ಕೀಡಾಗಿದ್ದಾರೆ.
ಭೂಕಂಪನ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.8ರಷ್ಟು ದಾಖಲಾಗಿದೆ.
ಕಳೆದ ತಿಂಗಳು ಸಿಂದಗಿ ಪಟ್ಟಣದಲ್ಲಿ ಕೂಡ ಸರಣಿ ಭೂಕಂಪನ ಅನುಭವವಾಗಿತ್ತು. ಈಗ ನಗರ ಭಾಗದಲ್ಲಿ ಕಂಪನದ ಅನುಭವ ಆಗಿ ಹೆಚ್ವಿನ ಆತಂಕ ಮೂಡಿಸಿದೆ.
Next Story





