ವಿಜಯಪುರ: ಸರ್ಕಾರಿ ಮೆಡಿಕಲ್ ಕಾಲೇಜ್ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ; ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಬೆಂಬಲ

ವಿಜಯಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪಿಪಿಪಿ ಮಾದರಿ ವಿರೋಧಿಸಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯಿಂದ ಕಳೆದ 20 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಅವರು, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು. ಶೀಘ್ರದಲ್ಲೇ ಎಲ್ಲರೂ ಸೇರಿ ಸಿಎಂ ಬಳಿಗೆ ನಿಯೋಗ ಕೊಂಡೊಯ್ದು ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಒತ್ತಾಯಿಸೋಣ. ನಿಯೋಗದ ಎಲ್ಲ ಜವಾಬ್ದಾರಿ ವಹಿಸಿಕೊಳ್ಳತ್ತೇನೆ ಎಂದು ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಹಕ್ಕು. ಈ ಹೋರಾಟ ನ್ಯಾಯಯುತವಾಗಿದೆ. ಈಗಾಗಲೇ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟದ ಪರವಾಗಿರುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪನೆಯಾಗುವ ವಿಶ್ವಾಸವಿದೆ. ಅಲ್ಲಿವರೆಗೂ ಹೋರಾಟ ಮುಂದುವರಿಯಲಿ ಎಂದರು.
ಪಾಲಿಕೆ ಸದಸ್ಯರಾದ ದಿನೇಶ ಹಳ್ಳಿ, ಆರತಿ ಶಹಾಪೂರ, ಮುಖಂಡರಾದ ಪರಶುರಾಮ ಹೊಸಮನಿ, ದೀಪಾ ಕುಂಬಾರ, ಹಮೀದಾ ಪಟೇಲ್, ಎಂ.ಕೆ. ಕೆಂಭಾವಿ, ರುಬೀನಾ ಗುಂದಗಿ, ಇಲಿಯಾಸ್ ಸಿದ್ದಿಕಿ, ಅಕ್ತರ್ ಮುತ್ತವಲ್ಲಿ, ಸೌಕತ್ ಇನಾಮದಾರ, ಅತೀಕ ಹತ್ತರಕಿಹಾಳ, ಭಾರತಿ ಹೊಸಮನಿ, ಕವಿತಾ ಧನರಾಜ್, ಈರಪ್ಪ ಕುಂಬಾರ, ಗೀತಾ ಕುಂಬಾರ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ವಿದ್ಯಾವತಿ ಅಂಕಲಗಿ, ಅಕ್ರಂ ಮಾಶ್ಯಾಳಕರ, ಮಲ್ಲಿಕಾರ್ಜುನ ಎಚ್.ಟಿ, ಸುರೇಶ ಬಿಜಾಪುರ, ಸಿದ್ದಲಿಂಗ ಬಾಗೇವಾಡಿ, ಜಗದೇವ ಸೂರ್ಯವಂಶಿ, ಲಕ್ಷ್ಮಣ ಕಂಬಾಗಿ, ಗಿರೀಶ ಕಲಘಟಗಿ, ಭರತ್ ಎಚ್.ಟಿ, ಪ್ರಭುಗೌಡ ಪಾಟೀಲ, ಶ್ರೀನಾಥ್ ಪೂಜಾರಿ, ನೀಲಾಂಬಿಕಾ ಬಿರಾದಾರ, ಲಕ್ಷ್ಮಣ ಸಜ್ಜನವರ, ಡಾ.ಚಂದು ಜಾಧವ, ಚೆನ್ನು ಕಟ್ಟಿ, ಲಿಂಗರಾಜ ಬಿದರಕುಂದಿ, ಮಲ್ಲಿಕಾರ್ಜುನ ಕೆಂಗನಾಳ, ಗೀತಾ ಪಾಟೀಲ, ಗೀತಾ ಕಟ್ಟಿ, ಶಾಂತಾಬಾಯಿ ಬಾಂಡೆಕರ, ಶಿವಬಾಳಮ್ಮ ಕೊಂಡಗೂಳಿ, ಮಹದೇವಪ್ಪ ತೇಲಿ, ಖಾಜೇಪಟೇಲ್ ಬಿರಾದಾರ, ರಾಜೇಸಾಬ, ನದಾಫ್, ಗುರಪ್ಪ ತಳವಾರ, ಅಮೋಘ ಉಕ್ಕಲಿ ಇದ್ದರು.







