ವಿಜಯಪುರ | ಬೈಕ್-ಟಿಪ್ಪರ ಮಧ್ಯೆ ಅಪಘಾತ ಶಿಕ್ಷಕ ಸಾವು

ವೆಂಕಟೇಶ ಕುಲಕರ್ಣಿ
ವಿಜಯಪುರ: ಬೈಕ್ ಹಾಗೂ ಟಿಪ್ಪರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾದ ಶಿಕ್ಷಕರೊಬ್ಬರು ಮೃತಪಟ್ಟರುವ ಘಟನೆ ಶನಿವಾರ ನಗರದ ಇಟಗಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಇಟ್ಟಂಗಿಹಾಳದ ಶಿಕ್ಷಕ ವೆಂಕಟೇಶ ಕುಲಕರ್ಣಿ ಮೃತಪಟ್ಟವರು. ಟಿಪ್ಪರ್ ಚಾಲಕ ಅಸ್ಲಾಂ ಮುಲ್ಲಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿದಿದೆ.
ವಿಜಯಪುರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





